ಕುಂಬಳೆ : ಕೇರಳದಲ್ಲಿ ಅತಿವೇಗದಿಂದ ಬೆಳೆಯುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿಯನ್ನು ಎದುರಿಸಿ ಪರಾಭವಗೊಳಿಸಲು ಇಲ್ಲಿನ ಎಡ ಮತ್ತು ಐಕ್ಯರಂಗ ಒಂದಾಗಿ ಸ್ಪರ್ಧಿಸಬೇಕಾದ
ಕಾಲ ಶೀಘ್ರವೇ ಬರಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಭಿಪ್ರಾಯಪಟ್ಟರು.
ಬಿಜೆಪಿ ಕುಂಬಳೆ ಪಂಚಾಯತ್ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಬಿಹಾರದಲ್ಲಿ ಸಹಿತ ದೇಶದ ಬಹತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೂ ಎನ್. ಡಿ. ಎ ಮೖತ್ರಿಕೂಟವನ್ನು ಪರಾಭವಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ನರೇಂದ್ರ ಮೋದಿ ಸರಕಾರ ಅನುಷ್ಟಾನಕ್ಕೆ ತಂದ ಜನಮುಖಿಯಾದ ಜನಕ್ಷೇಮ ಯೋಜನೆಗಳು ಮತ್ತು ಅಭಿವೃದ್ದಿಯ ಸಾಧನೆಗಳಾಗಿವೆ ಎಂದರು.

ಕುಂಬಳೆ ಪಂಚಾಯತಿನ ಆಡಳಿತ ಸಂಪೂರ್ಣ ವಿಫಲ ಮತ್ತು ಭ್ರಷ್ಟಾಚಾರದೊಂದಿಗೆ ಪರಾಜಯವಾಗಿದೆ. ಕುಂಬಳೆಯಲ್ಲಿ ಕುಡಿಯುವ ನೀರು ಮೊಟಕಾಗಿ ತಿಂಗಳು ಸಂದರೂ ಅದನ್ನು ಸಮರ್ಪಕವಾಗಿ ಪರಿಹರಿಸಲಾಗದೇ ಇರುವುದು ಆಡಳಿತ ವೖಫಲ್ಯಕ್ಕೆ ಕೇವಲ ಒಂದು ನಿದರ್ಶನವಾಗಿದೆ ಎಂದವರು ಉಲ್ಲೇಖಿಸಿದರು.

ಬಿಜೆಪಿ ರಾಜ್ಯ ಘಟಕ ಸದಸ್ಯ, ಹಿರಿಯ ನಾಯಕ ವಿ. ರವೀಂದ್ರನ್ ಧ್ವಜಾರೋಹಣ ಮಾಡಿದರು. ಕುಂಬಳೆ ಸೌತ್ ಬಿಜೆಪಿ ಘಟಕದ ಅಧ್ಯಕ್ಷ ಸುಜಿತ್ ರೖ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪಿ. ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಮಂಡಲಾಧ್ಯಕ್ಷ ಸುನಿಲ್ ಅನಂತಪುರ, ಕುಂಬಳೆ ನೋರ್ತ್ ಏರಿಯಾ ಘಟಕ ಅಧ್ಯಕ್ಷ ಶಿವಪ್ರಸಾದ ರೖ ಮಡ್ವ, ಒಬಿಸಿ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಮಹಿಳಾ ಮೋರ್ಛಾ ಪ್ರ. ಕಾರ್ಯದರ್ಶಿ ಪ್ರೇಮಲತಾ ಎಸ್ ಮೊದಲಾದವರು ಮಾತನಾಡಿದರು. ಸ್ಥಳೀಯಾಡಳಿತ ಚುನಾವಣಾ ಅಭ್ಯರ್ಥಿಗಳೆಂದು ನಿರ್ಣಯಗೊಂಡವರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.








