ಕುಂಬಳೆ: ಪಂಚಾಯತಿನ ಲೀಗ್ ಭ್ರಷ್ಟಾಚಾರಕ್ಕೆ ಬಿಜೆಪಿಯ ಬೆಂಬಲ : ಎಡರಂಗ ಚುನಾವಣಾ ಸಮಾವೇಶದಲ್ಲಿ ಆರೋಪ

by Narayan Chambaltimar

ಕುಂಬಳೆ: ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಎಡ
ಪ್ರಜಾಪ್ರಭುತ್ವರಂಗ (LDF)ದ ಕುಂಬಳೆ ಪಂಚಾಯತ್ ಸಮಿತಿಯ ಸಮಾವೇಶವು ಕುಂಬಳೆಯಲ್ಲಿ ಜರಗಿತು.
ಇಲ್ಲಿನ ಪೖ ಸಭಾಂಗಣದಲ್ಲಿ ನಡೆದ ಸಮಾವೇಶವನ್ನು ಸಿಪಿಐಎಂ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ. ಆರ್ ಜಯಾನಂದ ಉದ್ಘಾಟಿಸಿದರು.


ಈ ಸಂದರ್ಭ ಮಾತನಾಡಿದ ಅವರು ಕಳೆದೆ ಒಂದು ದಶಕದ ಎಡರಂಗದ ರಾಜ್ಯಾಡಳಿತ ದೇಶಕ್ಕೆ ಮಾದರಿಯಾಗಿದ್ದು, ಸರಕಾರದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮುಸ್ಲಿಂ ಲೀಗ್ ಆಡಳಿತ ಸಮರ್ಪಕ ಜಾರಿಗೆ ತಾರದೇ ಜನರಿಗೆ ವಂಚನೆ ಎಸಗಿದೆ ಎಂದರು.
ಸಭೆಯಲ್ಲಿ ಸಿದ್ದಿಕ್ ಅಲಿ ಮೊಗ್ರಾಲ್ ಅಧ್ಯಕ್ಷತೆ ವಹಿಸಿದರು. .


ಏರಿಯಾ ಕಾರ್ಯದರ್ಶಿ ಸಿ. ಎ. ಸುಬೈರ್ ಮಾತನಾಡುತ್ತ ಕುಂಬಳೆ ಪಂಚಾಯತಿನ ಕಳೆದ 50 ವರುಷದ
ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆಡಳಿತದಿಂದ ಬೇಸತ್ತ ಕುಂಬಳೆಯ ಜನತೆ ಬದಲಾವಣೆ ಅಗ್ರಹಿಸುತಿದ್ದಾರೆ. ಪ್ರಧಾನ ವಿರೋಧ ಪಕ್ಷ ವಾದ ಬಿಜೆಪಿ ಯೂ ಆಡಳಿತ ಪಕ್ಷದ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತಿದೆ ಎಂದರು. ಸಭೆಯಲ್ಲಿ ಎಡರಂಗದ ನೇತಾರ ರಾದ ಮೊಹಮ್ಮದ್ ಅಲಿ ಕುಂಬಳೆ, ತಾಜುದ್ದೀನ್ ಮೊಗ್ರಾಲ್, ನಾರಾಯಣ, ರಘುರಾಮ ಛತ್ರಂಪಳ್ಳ, ಯೂಸುಫ್. ಕೆ. ಬಿ, ಮುಂತಾದವರು ಭಾಗವಹಿಸಿದರು. ರತ್ನಾಕರ. ಜಿ ಸ್ವಾಗತಿಸಿ ವಿನೋದ್ ಕುಮಾರ್ ವಂದಿಸಿದರು. ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವ ಎಡರಂಗದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00