103
ಮುಳ್ಳೇರಿಯ : ವಿದ್ಯುತ್ ಲೖನ್ ಎಳೆವ ಕಾಮಗಾರಿಯ ನಡುವೆ ಇಲೆಕ್ಟ್ರಿಕ್ ಪೋಸ್ಟ್ ಕುಸಿದು ಬಿದ್ದು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ನೌಕರ ಮೃತಪಟ್ಟ ಘಟನೆ ನಡೆದಿದೆ.
ಕುಂಟಾರು ಹುಣ್ಸಡ್ಕ ನಿವಾಸಿ ಸಂಜೀವ ರಾವ್ ಅವರ ಪುತ್ರ ಎಚ್. ಯತೀಶ್ ( 46) ಮೃತ ವ್ಯಕ್ತಿಯಾಗಿದ್ದಾರೆ.

ಗುರುವಾರ ಮಧ್ಯಾಹ್ನ ವಿದ್ಯುತ್ ಲೖನ್ ಕಾಮಗಾರಿ ನಡುವೆ ಈ ದುರಂತ ಸಂಭವಿಸಿದೆ. ಮುಳ್ಳೇರಿಯ ಸಮೀಪದ ಕರ್ಮಂತೋಡಿ ಎಂಬಲ್ಲಿ ವಿದ್ಯುತ್ ತಂತಿ ಎಳೆದು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾಗ
ಕಂಬ ಕುಸಿದು ದೇಹಕ್ಕೆ ಬಿದ್ದು ದುರಂತ ಉಂಟಾಗಿದೆ.
ಕೂಡಲೇ ಜತೆಗಿದ್ದ ಸಹ ಕಾರ್ಮಿಕರು ಕಾಸರಗೋಡು ಜನರಲ್ ಆಸ್ಪತ್ರೆಗೆ ಸೇರಿಸಿದರೂ ಜೀವಾಪಾಯದಿಂದ ರಕ್ಷಿಸಲಿಕ್ಕಾಗಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬದವರು ಕೊಂಡೊಯ್ದರು.







