ಕ್ಯಾಂಪ್ಕೋ ನಿರ್ದೇಶಕ ಸ್ಥಾನಕ್ಕೆ ಕೇರಳ -ಕರ್ನಾಟಕದ 13ಮಂದಿ ಅವಿರೋಧ ಆಯ್ಕೆ: ಆರು ಸ್ಥಾನಕ್ಕೆ ನ. 23ರಂದು ಚುನಾವಣೆ

by Narayan Chambaltimar

ಮಂಗಳೂರು : ಅಡಿಕೆ ಬೆಳೆಗಾರರ ಕೇರಳ -ಕರ್ನಾಟಕದ ಅಂತರ್ ರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಆಡಳಿತ ಮಂಡಳಿಯ ಆರು ನಿರ್ದೇಶಕ ಸ್ಥಾನಕ್ಕೆ ನ. 23ರಂದು ಚುನಾವಣೆ ನಡೆಯಲಿದೆ.
ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಚುನಾವಣೆ ಜರಗಲಿದೆ.

ಒಟ್ಟು 19ನಿರ್ದೇಶಕ ಸ್ಥಾನಗಳಿದ್ದು, ಕರ್ನಾಟಕ 10ಮತ್ತು ಕೇರಳ 9ಸ್ಥಾನ ಹೊಂದಿದೆ. ಈ ಪೖಕಿ ಕೇರಳದ 9ಹಾಗೂ ಕರ್ನಾಟಕದ 4 ಸೇರಿ 13 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ ಕರ್ನಾಟಕದ ಆರು ಸ್ಥಾನಕ್ಕೆ ಎಂಟು ಮಂದಿ ಅಭ್ಯರ್ಥಿಗಳಿದ್ದಾರೆ. ಈಗಾಗಲೇ ಅವಿರೋಧ ಅಯ್ಕೆಯಾದವರೆಲ್ಲರೂ ಸಹಕಾರ ಭಾರತಿ ಬೆಂಬಲಿತರಾಗಿದ್ದಾರೆ.

ಅವಿರೋಧ ಆಯ್ಕೆ
ಕೇರಳದಿಃದ ಸತೀಶ್ಚಂದ್ರ ಭಂಡಾರಿ ಕೋಳಾರು,
ಸದಾನಂದ ಶೆಟ್ಟಿ, ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣ, ಸೌಮ್ಯ, ಗಣೇಶ್ ಕುಮಾರ್, ವೆಂಕಟ್ರಮಣ ಭಟ್, ಪದ್ಮರಾಜ ಪಟ್ಟಾಜೆ ಹಾಗೂ ಕರ್ನಾಟಕದಿಂದ ಗಣೇಶ್, ರಾಘವೇಂದ್ರ ಎಂ. ಎಚ್, ವಿಶ್ವನಾಥ ಈಶ್ವರ ಹೆಗಡೆ, ಮಾಲಿನಿ ಪ್ರಸಾದ್ ಎಂಬಿವರು ಆಯ್ಕೆಗೊಂಡಿದ್ದಾರೆ.

ಕ್ಯಾಂಪ್ಕೋ ನಿರ್ದೇಶಕ ಸ್ಥಾನಕ್ಕೆ 2010ರ ಬಳಿಕ 15ವರ್ಷಗಳ ಅವಧಿಯಲ್ಲಿ ಚುನಾವಣೆ ನಡೆಯುವುದು ಇದೇ ಮೊದಲಬಾರಿಯಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00