ಬೆತ್ತಲೆ ಚಿತ್ರ ಕಳುಹಿಸಿದರೆ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವೆ ನೆಂದು ವಿದ್ಯಾರ್ಥಿನಿಗೆ ವಾಟ್ಸಪ್ ಸಂದೇಶ: ನಕಲಿ ನಿರ್ದೇಶಕನ ಬಂಧನ

by Narayan Chambaltimar

ಕಾಸರಗೋಡು: ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ವಿದ್ಯಾರ್ಥಿನಿಯ ಬೆತ್ತಲೆ ಚಿತ್ರ ಕಳಿಸಲು ಹೇಳಿದ ಕಾಸರಗೋಡು ಮೂಲದ ನಕಲಿ ಸಿನಿಮ ನಿರ್ದೇಶಕನನ್ನು ಬಂಧಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕಾಟಿಪಳ್ಳಂ ನಿವಾಸಿ ಶಿಬಿ (29)
ಬಂಧಿತ ಆರೋಪಿಯಾಗಿದ್ದಾನೆ.

ಕೋಝಿಕ್ಕೋಡ್ ಜಿಲ್ಲೆಯ ಬೇಪೂರ್ ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಯ ದೂರಿನಂತೆ ಬೇಪೂರ್ ಠಾಣಾ ಪೋಲೀಸರು ಈತನನ್ನು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿದ್ದಾರೆ. ತಾನೊಬ್ಬ ಸಿನಿಮ ನಿರ್ದೇಶಕನೆಂದು ನಂಬಿಸಿ ವಾಟ್ಸಪ್ ಸಂಪರ್ಕ ಹೊಂದಿದ ಈತ ಅಶ್ಲೀಲ ಸಂದೇಶ ಕಳಿಸುತ್ತಾ, ವಿದ್ಯಾರ್ಥಿನಿಯ ಬೆತ್ತಲೆ ಚಿತ್ತಳರ ಕಳುಹಿಸಿ ಕೊಡಲು ಆಗ್ರಹಿಸಿದ್ದನು. ಇದರಂತೆ ವಿದ್ಯಾರ್ಥಿನಿ ಪೋಲೀಸರಿಗೆ ದೂರು ನೀಡಿದ್ದಳು. ಪೋಲೀಸರು ಸೖಬರ್ ಸೆಲ್ ಸಹಾಯದಿಂದ ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00