ಪಾಲಕ್ಕಾಡ್:ಸರಕಾರಿ ಕಾಯ್ದೆ ಉಲ್ಲಂಘಿಸಿ ಆರ್. ಎಸ್. ಎಸ್. ಪಥಸಂಚಲನದಲ್ಲಿ ಪಾಲ್ಗೊಂಡ ಅಬಕಾರಿ ಇನ್ಸ್ಪೆಕ್ಟರ್ : ಹುದ್ದೆಯಿಂದ ಅಮಾನತು

by Narayan Chambaltimar

ಕಾಸರಗೋಡು: ಕೇರಳದ ಪಾಲಕ್ಕಾಡ್ ನಲ್ಲಿ ಆರ್. ಎಸ್. ಎಸ್. ಪಥಸಂಚಲನದಲ್ಲಿ ಪಾಲ್ಗೊಂಡರೆಂಬ ಕಾರಣ ಮುಂದಿಟ್ಟು ಅಬಕಾರಿ ರೇಂಜ್ ಆಫೀಸಿನ ಸಹಾಯಕ ಇನ್ಸ್ಪೆಕ್ಟರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.


ಮಣ್ಣಾರ್ ಕಾಡ್ ಅಬಕಾರಿ ರೇಂಜ್ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಕೆ. ವಿ. ಷಣ್ಮುಖನ್ ಅಮಾನತುಗೊಂಡ ವ್ಯಕ್ತಿಯಾಗಿದ್ದಾರೆ.
ಪಾಲಕ್ಕಾಡ್ ಜಿಲ್ಲಾ ಪೋಲೀಸ್ ವರಿಷ್ಠರು ನೀಡಿದ ತನಿಖಾ ವರದಿಯ ಹಿನ್ನೆಲೆಯಲ್ಲಿ ಅಬಕಾರಿ ಆಯುಕ್ತರು ಈ ಕ್ರಮ ಕೖಗೊಂಡರು.

ಅಕ್ಟೋಬರ್ ಎರಡರಂದು ಪಾಲಕ್ಕಾಡಿನ ಕಲ್ಲಡಿಕೋಡ್ ಎಂಬಲ್ಲಿ ನಡೆದ ಪಥಸಂಚಲನದಲ್ಲಿ ಪೂರ್ಣ ಗಣವೇಷಧಾರಿಯಾಗಿ ಷಣ್ಮುಖನ್ ಪಾಲ್ಗೊಂಡಿದ್ದರು.
ಸರಕಾರಿ ನೌಕರ ಪಾಲಿಸಬೇಕಾದ ಔದ್ಯೋಗಿಕ ಸೇವಾ ಗೌರವ ಮತ್ತು ಕಾಯ್ದೆಗಳನ್ನು ಪಾಲಿಸದೇ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00