73
ಮುಂಬಯಿ: ಬಾಲಿವುಡ್ ಚಿತ್ರರಂಗದ ಮಹಾನ್ ನಟನಾಗಿ ಮೆರೆದ ಧರ್ಮೇಂದ್ರ (89) ನಿಧನರಾದರು. ಅಸೌಖ್ಯದಿಂದ ಬಳಲಿ ದೀರ್ಘಾವಧಿ ಮುಂಬಯಿಯ ಬ್ರೀಚ್ ಕಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.
1960ರಲ್ಲಿ “ದಿಲ್ ಬಿ ತೇರಾ ಹಂ ಬಿ ತೇರೆ” ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲೂರಿದ್ದ ಅವರು ಸಾಮಾನ್ಯ ಪೋಷಕ ಪಾತ್ರಗಳಿಂದ ನಟನೆಯ ಪಯಣ ಆರಂಭಿಸಿದ್ದರು.
ಆರು ದಶಕಕ್ಕೂ ಅಧಿಕ ಚಿತ್ರರಂಗದಲ್ಲಿ ನಟಿಸಿ ದಂತಕತೆಯಾದ ಅವರ ಕೊನೆಯ ಚಿತ್ರ ‘ಇಕ್ಕೀಸ್’ ಡಿ. 25ರಂದು ಬಿಡುಗಡೆಯಾಗಲಿದೆ.
ಅವರಿಗೆ 2021ರಲ್ಲಿ ಭಾರತ ಸರಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು.
ಪಂಜಾಬಿನ ಲುಧಿಯಾನ ಗ್ರಾಮದಲ್ಲಿ ಕೃಷನ್ ಡಿಯೋಲ್ ಎಂಬ ಹೆಸರಿನೊಂದಿಗೆ ಜನಿಸಿ, ಹಳ್ಳಿಯಲ್ಲಿ ಬೆಳೆದ ಅವರು ನಟಿ ಹೇಮಾಮಾಲಿನಿಯನ್ನು ಪ್ರೀತಿಸಿ ಅವರನ್ನು ಎರಡನೇ ಮದುವೆಯಾಗಿದ್ದರು. ಅವರು ಮಕ್ಕಳಾದ ನಟ ಸನ್ನಿ ಡಿಯೋಲ್, ಇಶಾ ಡಿಯೋಲ್, ಬಾಬಿ ಡಿಯೋಲ್ ಅವರನ್ನಗಲಿದ್ದಾರೆ.








