ದೆಹಲಿಯಲ್ಲಿ ಉಗ್ರಗಾಮಿಗಳಿಂದ ಕಾರು ಸ್ಫೋಟ, ಸಾವಿನ ಸಂಖ್ಯೆ 13ಕ್ಕೇರಿಕೆ

by Narayan Chambaltimar
  • ದೆಹಲಿಯಲ್ಲಿ ಉಗ್ರಗಾಮಿಗಳಿಂದ ಕಾರು ಸ್ಫೋಟ, ಸಾವಿನ ಸಂಖ್ಯೆ 13ಕ್ಕೇರಿಕೆ
  • ಕಾಸರಗೋಡಿನ ರೖಲು ನಿಲ್ದಾಣಗಳಲ್ಲಿ ಬಾಂಬ್ ಸ್ಕ್ವಾಡ್ ತಪಾಸಣೆ, ಗಡಿ ಭಾಗದಲ್ಲಿ ಪೊಲೀಸ್ ವಾಹನ ತಪಾಸಣೆ

ಕಾಸರಗೋಡು: ದೆಹಲಿ ಕೆಂಪುಕೋಟೆ ಬಳಿಯ ಲಾ ಕಿಲ್ಲಾ ಮೆಟ್ರೋ ನಿಲ್ದಾಣದ ಬಳಿ ಮುಸ್ಸಂಜೆ ನಡೆದ ಸ್ಥಳಪೋಟದಲ್ಲಿ ಹಲವು ಕಾರುಗಳು ಸ್ಫೋಟವಾಗಿ ಪ್ರಾಥಮಿಕ ವರದಿಯಂತೆ 13ಕ್ಕೂ ಅಧಿಕ ಸಾವು ಸಂಭವಿಸಿದೆ. 15ಕ್ಕೂ ಅಧಿಕ ಮಂದಿ, ಗಂಭೀರವಾದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದೊಂದು ವ್ಯವಸ್ಥಿತ ಉಗ್ರಗಾಮಿ ಕೃತ್ಯವೆಂದು ಸಾಬೀತಾದ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಪೊಲೀಸ್ ಕಟ್ಟೆಚ್ಚರ ಮತ್ತು ತಪಾಸಣೆ ನಡೆಯುತ್ತಿದೆ.

ಕಾಸರಗೋಡಿನ ಗಡಿ ಭಾಗಗಳಲ್ಲಿ ರಾತ್ರಿ ವೇಳೆ ವಿಶೇಷ ವಾಹನ ತಪಾಸಣೆ ನಡೆಯುತ್ತಿದೆ. ಕಾಸರಗೋಡು, ಕಾಞಂಗಾಡು ರೖಲು ನಿಲ್ದಾಣಗಳಲ್ಲಿ ಬಾಂಬ್ ಸ್ಕ್ವಾಡ್ ಕಟ್ಟೆಚ್ಚರದ ತಪಾಸಣೆ ನಡೆಸಿದೆ. ಆದರೆ ಈ ಕುರಿತಾದ ಮಾಧ್ಯಮ ದೃಶ್ಯ ಚಿತ್ರೀಕರಣವನ್ನು ತಡೆಯಲಾಗಿದೆ. ದೇಶ ಸುರಕ್ಷಾ ದೃಷ್ಟಿಯಲ್ಲಿ ದೃಶ್ಯ ದಾಖಲೀಕರಣ ಮಾಡುವಂತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಒಟ್ಟು ಗಾಯಗೊಂಡಿದ್ದು, ಮರಣ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಸೋಮವಾರ ಸಂಜೆ ಏಳರ ವೇಳೆಗೆ ಸ್ಫೋಟ ನಡೆದಿದೆ. ಮೆಟ್ರೋ ನಿಲ್ದಾಣ ಬಳಿ ನಿಲ್ಲಿಸಿದ್ದ ಕಾರೊಂದು ಸ್ಫೋಟವಾಗುವ ಮೂಲಕ ದುರಂತ ನಡೆದಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00