81
ಕಾಸರಗೋಡು: ರೖಲ್ವೇ ಪೊಲೀಸ್ ಸಿಬಂದಿಯನ್ನು ಆಕ್ರಮಿಸಿ ಹಲ್ಲೆಗೖದು, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ರೖಲ್ವೇ ಗೇಟ್ ಕೀಪರ್ ಕಣ್ಣೂರು ಮಂಬರಂ ನಿವಾಸಿ ಧನೇಷ್ (42)ನನ್ನು ಬಂಧಿಸಲಾಗಿದೆ.
ಕಣ್ಣೂರು ರೖಲ್ವೇ ಪೊಲೀಸರು ಈತನನ್ನು ಬಂಧಿಸಿದರು. ನಿನ್ನೆ ರಾತ್ರಿ 11.45ರ ವೇಳೆಗೆ ಕಣ್ಣೂರು ರೖಲು ನಿಲ್ದಾಣದಲ್ಲಿ ಆರ್. ಪಿ. ಎಫ್ ಪೋಲೀಸ್ ಸಿಬಂದಿ ಎಡಪ್ಪಾಳ್ ವಟ್ಟಕುಳಂ ನಿವಾಸಿ ಪಿ. ಶಶಿಧರನ್ (53)ಅವರನ್ನು ಆಕ್ರಮಿಸಿ ಹಲ್ಲೆಗೖದ ಪ್ರಕರಣಕ್ಕೆ ಸಂಬಂಧಿಸಿ ಬಂಧನ ನಡೆಯಿತು.

ಕಣ್ಣೂರು ರೖಲು ನಿಲ್ದಾಣದ ಫ್ಲಾಟ್ ಫಾಮ್ ನಲ್ಲಿ ಶಶಿಧರನ್ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಫ್ಲಾಟ್ ಫಾಮ್ ನಲ್ಲಿ ಧನೇಷ್ ಬೇಜವಾಬ್ದಾರಿಯಿಂದ ಅನಾಗರಿಕನಂತೆ ಬಿದ್ದುಕೊಂಡಿದ್ದನು. ಮಲಗಿದ್ದ ಈತನನ್ನು ಕರ್ತವ್ಯದಂತೆ ಎಬ್ಬಿಸಿದ ಧ್ವೇಷದಲ್ಲಿ ಅಶ್ಲೀಲ ನಿಂದಿಸಿ ಆಕ್ರಮಿಸಿ ಹಲ್ಲೆಗೖದು, 15ಸಾವಿರೂ ರೂ ಮೌಲ್ಯದ ಬಾಡಿ ವೋನ್ ಕ್ಯಾಮರ ನಾಶಪಡಿಸಿರುವುದಾಗಿ ದೂರಲಾಗಿದೆ.






