69
- ಮತದಾರರ ಪಟ್ಟಿ ಪರಿಷ್ಕರಣೆಯ ಎಲ್ಲಾ ಸೂಚನೆ ,ನಿರ್ದೇಶನಗಳನ್ನು ಕನ್ನಡದಲ್ಲೂ ಒದಗಿಸಿ : ಬಾಕುಡ ಸಮಾಜ ಕೇಂದ್ರ ಸಮಿತಿ.
ಮಂಜೇಶ್ವರ :ಚುನಾವಣೆಗೆ ಸಂಬಂಧಿಸಿ ಬಿ ಎಲ್ ಒ ಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಶನ್ ಫಾರ್ಮ್ ಮಲಯಾಳದಲ್ಲಿ ಮಾತ್ರವೇ ಮುದ್ರಣಗೊಂಡಿರುವುದು ಖಂಡನೀಯವಾಗಿದ್ದು ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಜನರು ಕನ್ನಡ ಭಾಷೆಯನ್ನು ಓದಲು, ಬರೆಯಲು ತಿಳಿದವರಾಗಿದ್ದು ಈ ರೀತಿಯ ತಾರತಮ್ಯ ನೀತಿಯಿಂದ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡತ್ತಾಗಿದೆ ಎಂದು ಬಾಕುಡ ಸಮಾಜ ಅಭಿಪ್ರಾಯಪಟ್ಟಿದೆ.

ಮಲಯಾಳಂನಲ್ಲಿ ಮಾತ್ರವೇ ಇರುವ ಫಾರ್ಮ್ ನ್ನು ಕನ್ನಡಿಗರು ಭರ್ತಿಗೊಳಿಸುವ ಸಂದರ್ಭದಲ್ಲಿ ತಪ್ಪಾದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಆದ್ದರಿಂದ ಕಾಸರಗೋಡಿನಲ್ಲಿ ಮಲಯಾಳಂ ಜೊತೆಗೆ ಕನ್ನಡದಲ್ಲೂ ಫಾರ್ಮ್, ಅರ್ಜಿಗಳನ್ನು ವಿತರಣೆ ಮಾಡಬೇಕು.ಇಲ್ಲದಿದ್ದಲ್ಲಿ ಎಲ್ಲಾ ಕನ್ನಡಿಗರೂ ಇದನ್ನು ಸ್ವೀಕರಿಸದೆ ತಿರಸ್ಕರಿಸಬೇಕು ಎಂದು ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾದ ತುಳಸಿದಾಸ್ ಮಂಜೇಶ್ವರ ಕರೆ ನೀಡಿದ್ದಾರೆ.






