ಬೆಂಗಳೂರು : ಕನ್ನಡದ ಜನಪ್ರಿಯ ಕಿರುತೆರೆ ನಟಿಯೊಬ್ಬರಿಗೆ ನಿರಂತರ ಅಶ್ಲೀಲ ಸಂದೇಶ, ಅಶ್ಲೀಲ ವೀಡಿಯೋ, ಗುಪ್ತಾಂಗ ವೀಡಿಯೋ ಕಳಿಸಿ ಲೖಂಗಿಕ ಕಿರುಕುಳ ನೀಡಿದ ಕೇರಳೀಯನನ್ನು ಬಂಧಿಸಲಾಗಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಮೇನೇಜರ್ ಆಗಿ ಕೆಲಸದಲ್ಲಿದ್ದ
ನವೀನ್. ಕೆ. ಮೆನೋನ್ (21)ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. 41ರ ಹರೆಯದ ಕನ್ನಡ, ತೆಲುಗು ಟಿ. ವಿ. ಧಾರವಾಹಿ ನಟಿಯ ದೂರಿನಂತೆ ಈತನನ್ನು ಬಂಧಿಸಲಾಗಿದೆ.

ಕಳೆದ ಮೂರು ತಿಂಗಳಿಂದ ಆರೋಪಿ ತನಗೆ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿ ಕಿರುಕುಳ ನೀಡಿರುವುದಾಗಿ ನಟಿ ಆರೋಪಿಸಿದ್ದಾರೆ. ಆರಂಭದಲ್ಲಿ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಅದನ್ನು ರಿಜೆಕ್ಟ್ ಮಾಡಿದಾಗ ಮೆಸೆಂಜರ್ ಮೂಲಕ ಸಂದೇಶ ಕಳಿಸಿದ್ದನು. ಮೆಸೇಜ್ ಮಾಡದಂತೆ ಎಚ್ಚರಿಕೆ ನೀಡಿ ನಂಬರ್ ಬ್ಲಾಕ್ ಮಾಡಿದ್ದರೂ, ಬೆಂಬಿಡದೇ ಬಳಿಕ ಬೇರೆ ಐಡಿಯಿಂದ ಗುಪ್ತಾಂಗದ ಮತ್ತು ರತಿ ವಿಕೃತಿಗಳ ವೀಡಿಯೋ ಕಳಿಸಿದ್ದನೆಂದು ಹೇಳಲಾಗಿದೆ. ಈತನ ಕಿರುಕುಳ ತಾಳಲಾರದೇ ನಟಿ ಪೊಲೀಸ್ ದೂರು ನೀಡಿದ್ದರು.







