43
ನವಿ ಮುಂಬಯಿ: ದಕ್ಷಿಣ ಆಫ್ರಿಕಾ ತಂಡವನ್ನು ವೀರೋಚಿತವಾಗಿ ಮಣಿಸಿ ಐತಿಹಾಸಿಕ ಏಕದಿನ ಮಹಿಳಾ ವಿಶ್ವಕಪ್ ಎತ್ತಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಭಾರೀ ಬಹುಮಾನವನ್ನು ಘೋಷಿಸಿದೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೖಕಿಯ “ಮಹಿಳಾ ವಿಶ್ವಕಪ್ ನಲ್ಲಿ ಚಾರಿತ್ರಿಕ ಪ್ರದರ್ಶನವಿತ್ತ ಭಾರತೀಯ ತಂಡ ಮತ್ತು ಸಿಬಂದಿಗಳಿಗೆ ಒಟ್ಟು 51ಕೋಟಿ ರೂಗಳ ಬಹುಮಾನ ನೀಡಲಾಗುವುದೆಂದು ಪ್ರಕಟಿಸಿದರು.

ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತೀಯ ವನಿತಾ ತಂಡ ನವಿ ಮುಂಬಯಿಯ ಡಿ. ವೖ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೖನಲ್ ನಲ್ಲಿ ದ. ಆಫ್ರಿಕಾವನ್ನು 52ರನ್ ಗಳಿಂದ ಮಣಿಸಿ, ಐದು ಓವರ್ ಬಾಕಿ ಇರುವಂತೆಯೇ ಗೆದ್ದು ಇತಿಹಾಸ ಬರೆಯಿತು.
ಈ ಗೆಲುವು ಪುರುಷರ ಏಕದಿನ ಕ್ರಿಕೆಟಿನಲ್ಲಿ ಕಪಿಲ್ ದೇವ್ ನೇತೃತ್ವದ ತಂಡ ಪ್ರಥಮ ವಿಶ್ವಕಪ್ ಗೆದ್ದುದಕ್ಕೆ ಸಮಾನವಾಗಿದ್ದು, ಭಾರತೀಯ ಕ್ರಿಕೆಟಿನಲ್ಲಿ ಮಹಿಳಾ ಪರ್ವಕ್ಕೆ ಮುನ್ನುಡಿ ಬರೆದಿದೆ.







