ನವೀ ಮುಂಬಯಿ:, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಲಿಷ್ಟ ದ. ಆಫ್ರಿಕಾ ವನ್ನು ವೀರೋಚಿತ ಮಣಿಸಿ ಭಾರತೀಯ ವನಿತೆಯರು ವಿಶ್ವ ಕಪ್ ಕಿರೀಟ ಮುಡಿದಿದ್ದಾರೆ. ತನ್ಮೂಲಕ ದೇಶದಲ್ಲಿ ಮಹಿಳಾ ಕ್ರಿಕೆಟಿನ ನವಶಕೆಗೆ ಮಂನ್ನುಡಿ ಬರೆದಿದ್ದಾರೆ.

ನವೀಮುಂಬಯಿಯ ಡಿವೖ ಟ
ಪಾಟೀಲ್ ಕ್ರೀಡಾಂಗಣದಲ್ಲಿ ಆದಿತ್ಯವಾರ ನಟ್ಟಿರುಳು ಹನ್ನೆರಡು ಗಂಟೆ ದಾಟುವ ವೇಳೆ ಇನ್ನೂ ಐದು ಒವರಿನ 30ಎಸೆತ ಬಾಕಿ ಇರುವಂತೆಯೇ 52ರನ್ ಗಳಿಗೆ ದ. ಆಫ್ರಿಕಾವನ್ನು ಮಣಿಸಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟ ವೀರ ನಾರಿಯರು ಹೊಸ ಚರಿತೆ ಬರೆದಿದ್ದಾರೆ.
ನಿರ್ಣಾಯಕ ಫೖನಲ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ಐವತ್ತು ಒವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 298ರನ್ ಗಳಿಸಿತು. ಅದಕ್ಕುತ್ತರವಾಗಿ ದಿಟ್ಟ ಹೋರಾಟದ ಆರಂಭಕಂಡ ದ. ಆಫ್ರಿಕಾ 45ಒವರ್ಗಳಲ್ಲಿ 246ಕ್ಕೆ ಸರ್ವ ಪತನಗೊಂಡಿತು. ದ. ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಟ್ ಏಕಾಂಗಿ ಹೋರಾಟ ನಡೆಸಿ ಅಮೂಲ್ಯ ಶತಕ(101) ಗಳಿಸಿ ಭಾರತದ ಗೆಲುವನ್ನು ಕಸಿಯುವ ಭೀತಿ ಮೂಡಿಸಿದ್ದರು.
ವಿಶ್ವಕಪ್ ಕಾದಾಟದಲ್ಲಿ ಸತತ ಎಂಟು ಬಾರಿ ಟಾಸ್ ಸೋತು ದಾಖಲೆ ಬರೆದ ಭಾರತ ಫೖನಲಿನಲ್ಲಿ ಟಾಸ್ ಸೋತರೂ ವೀರೋಚಿತ ಆಟದಿಂದ ಗೆದ್ದಿದೆ. ಭಾರತದ ಗೆಲುವಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ಶಫಾಲಿ ಶರ್ಮ ಅಮೂಲ್ಯ ಕೊಡುಗೆ ಇತ್ತರು.







