ಕಾಸರಗೋಡು: ಎಸ್. ಐ. ಆರ್. (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ಯ ವಿಜ್ಞಾಪನೆ, ನೋಟಿಫಿಕೇಷನ್ ಸಹಿತ ಚುನಾವಣಾ ಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಕೖ ಬಿಟ್ಟಿರುವುದು ಪ್ರತಿಭಟನೀಯವೆಂದೂ, ಇದು ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿರುವ ಅತ್ಯಧಿಕ ಪ್ರಮಾಣದ ಕನ್ನಡಿಗ ಮತದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಭಿಪ್ರಾಯಪಟ್ಟರು.
ಎಸ್. ಐ. ಆರ್ ಚಟುವಟಿಕೆಗಳು ಪ್ರಾರಂಭವಾಗಲಿದ್ದು ಅದರ ನೋಟಿಫಿಕೇಷನ್ ಮಲಯಾಳದಲ್ಲಿ ಮಾತ್ರವೇ ಪ್ರಕಟಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಗಳ ಔದ್ಯೋಗಿಕ ಪೇಜ್ ಸಹಿತ ಎಲ್ಲಾ ಕಡೆ ಸೂಚನೆ, ಮಾಹಿತಿ, ನಿರ್ದೇಶಗಳು ಮಲಯಾಳದಲ್ಲಷ್ಟೆ ಪ್ರಕಟವಾಗಿದೆ. ಚುನಾವಣಾ ಸಂಬಂಧವಾದ ಎಲ್ಲಾ ಮಾಹಿತಿ, ನಿರ್ದೇಶನಗಳು ಕನ್ನಡದಲ್ಲೂ ಕಡ್ಡಾಯ ನೀಡಬೇಕೆಂದು ಅಶ್ವಿನಿ ಒತ್ತಾಯಿಸಿದರು.

- ಇಷ್ಟಕ್ಕೂ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಎಂದರೇನು?
ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಅನರ್ಹ ವ್ಯಕ್ತಿಗಳನ್ನು ಮತದಾರನಾಗಿ ಸೇರಿಸದಂತೆ ನೋಡಿಕೊಳ್ಳುವ ಪರಿಕ್ರಮವೇ ಈ ವಿಶೇಷ ಪರಿಷ್ಕರಣೆ.
ಅಧಿಸೂಚನೆಯ ಪ್ರಕಾರ ಹಕ್ಕು ಮತ್ತು ಆಕ್ಷೇಪಣೆಯನ್ನು ಪರಿಹರಿಸಿದ ಬಳಿಕವೇ ಹೊಸ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವ ಮುನ್ನ ನಡೆಯುವ ಪ್ರಕ್ರಿಯೆಗಳೇ ಮತದಾರರ ಪಟ್ಟಿಯ ತಿವ್ರ ಪರಿಷ್ಕರಣೆ ಎಂಬ ಎಸ್. ಐ. ಆರ್.
ಮನೆ, ಮನೆ ತೆರಳಿ ಮತದಾರರನ್ನು ಗಣತಿ ಮಾಡಿ ಖಚಿತ ಪಡಿಸುವುದನ್ನು ಎಸ್. ಐ. ಆರ್. ಸಮೀಕ್ಷೆ ಎನ್ನಲಾಗುತ್ತದೆ. ಕೇರಳದಲ್ಲಿದು ನ. 4ರಿಂದ ಆರಂಭವಾಗುತ್ತದೆ.







