- ಅನಂತಪುರದಲ್ಲಿ ಮಹಾ ಸ್ಫೋಟ: ಕಂಪಿಸಿದ ಸರೋವರ ಕ್ಷೇತ್ರ ಭೂಮಿ, ಪ್ಲೖವುಡ್ ಕಾರ್ಖಾನೆಯ ಬಾಯ್ಲರ್ ಸ್ಫೋಟಕ್ಕೆ ತತ್ತರಿಸಿದ ನಾಡು
- ಓರ್ವನ ಸಾವು, ಅನೇಕರಿಗೆ ಗಂಭೀರ, 15ಕ್ಕೂ ಅಧಿಕ ಮಂದಿಗೆ ಗಾಯ, ಮರಣ ಸಂಖ್ಯೆ ಹೆಚ್ಚಳ ಸಂಭಾವ್ಯ
ಕುಂಬಳೆ : ಇಲ್ಲಿನ ಅನಂತಪುರ ಕೖಗಾರಿಕಾ ಪ್ರಾಂಗಣದ ಪ್ವೖವುಡ್ ಕಾರ್ಖಾನೆಯಲ್ಲಿ ಭಾರೀ ಸ್ಪೋಟ ಸಂಭವಿಸಿದೆ.
ಇಂದು ಸಂಜೆ ಸುಮಾರು ಏಳರ ವೇಳೆಗೆ ಭಾರೀ ಸ್ಪೋಟ ಸಂಭವಿಸಿದ್ದು, ಪರಿಸರದ ಮನೆ, ಕಾರ್ಖಾನೆಗಳಿಗೆ ಛಿದ್ರಗೊಂಡ ಕಲ್ಲುಗಳು ರಟ್ಟಿದ್ದಲ್ಲದೇ, ಸ್ಫೋಟದ ಕಂಪನಕ್ಕೆ ಅನಂತಪುರ ಕ್ಷೇತ್ರ ಪರಿಸರವೇ ಕಂಪಿಸಿದೆ. ಘಟನೆಯಲ್ಲಿ ಹಲವು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಸುಮಾರು 15ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳ ಸಹಾಯದಿಂದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಪೖಕಿ ಓರ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಂಭಾವ್ಯತೆ ಇದೆ ಎನ್ನಲಾಗಿದೆ.
ಅನಂತಪುರದ ಡೆಕೋರ್ ಪ್ಯಾನೆಲ್ ಇಂಡಸ್ಟ್ರೀಸ್ ನಲ್ಲಿ
ಬಾಯ್ಲರ್ ಸ್ಫೋಟಗೊಂಡು ಈ ದುರಂತ ಉಂಟಾಗಿದೆ. ಸ್ಫೋಟದ ಸದ್ದು ಪರಿಸರದಲ್ಲಿ ಭಯ. ಭೀತಿಯ ಆತಂಕ ಸೃಷ್ಟಿಸಿ ಹಲವರು ಮನೆಯಿಂದ ಹೊರಗೆ ಓಡಿದರೆ, ಅನೇಕ ಮನೆಗಳ ಗಾಜಿಗೆ ಹಾನಿಯಾಗಿವೆ. ಕಾರ್ಖಾನೆ ಪರಿಸರದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕ ಯಾರನ್ನೂ ಅತ್ತ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅಪೂರ್ವ ತಟಾಕ ಕ್ಷೇತ್ಲ ಅನಂತಪುರ ದೇವಳ ಸುತ್ತಲಿನ ಪರಿಸರ ಕೖಗಾರಿಕಾ ಕೇಂದ್ರವಾಗಿದ್ದು, ಇಂಥಾ ದುರಂತ ಇದೇ ಮೊದಲಬಾರಿಯಾಗಿದೆ.
ಘಟನೆಯಿಂದಾಗಿ ಪರಿಸರಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.



