- ಆಬ್ ಕಿ ಬಾರ್ ಮೋದಿ ಸರ್ಕಾರ್’ಕ್ಯಾಂಪೇನ್ ಸೃಷ್ಟಿಸಿದ್ದ ಭಾರತೀಯ ಜಾಹೀರಾತು ಕ್ಷೇತ್ರದ ದಿಗ್ಗಜ ಪದ್ಮಶ್ರೀ ಪಿಯೂಷ್ ಪಾಂಡೆ ಇನ್ನಿಲ್ಲ
1980ರ ದಶಕದಿಂದ ಭಾರತೀಯ ಜಾಹೀರಾತು ಲೋಕಕ್ಕೆ ಸಕಾಲಿಕತೆಯ ವಿಶೇಷ ಮೆರುಗು ತುಂಬಿದ್ದ, ಜಾಹೀರಾತು ಜಗತ್ತಿನ ದಿಗ್ಗಜ ಪದ್ಮಶ್ರೀ ಪಿಯೂಷ್ ಪಾಂಡೆ(70) ಇಂದು ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದರು.
ಫೆವಿಕಾಲ್, ಏಷ್ಯನ್ ಪೆಯಿಂಟ್, ಡೖರಿಮಿಲ್ಕ್, ಕ್ಯಾಡ್ ಬರಿ, ವೊಡಾಫೋನ್, ಸೇರಿದಂತೆ ಜನಪ್ರಿಯ ಟಿವಿ ಜಾಹೀರಾತುಗಳ ಹಿಂದಿನ ಮಾಸ್ಟರ್ ಮೖಂಡ್ ಇವರಾಗಿದ್ದರು.


ರಾಜಸ್ಥಾನದ ಜೖಪುರ ಮೂಲದವರಾದ ಪಾಂಡೆ ಭಾರತದ ದೃಶ್ಯ ಮಾಧ್ಯಮ ರಂಗದ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದ (ಪಿ. ಆರ್)
ಮೇರು ಪ್ರತಿಭೆಯಾಗಿದ್ದರು. ದೇಶದ ಅತೀ ದೊಡ್ಡ ಜಾಹೀರಾತು ಕಂಪೆನಿ ಮತ್ತು ಪಿ. ಆರ್ ಏಜೆನ್ಸಿಯಾದ ಹೋಗಿಲಿವು India ದಲ್ಲಿ 1982ರಿಂದ ದುಡಿದು, ಸೃಜನಶೀಲತೆಯಿಂದ ಹೆಸರು ಮಾಡಿದ್ದ ಅವರು
ಇತೀಚೆಗೆ ಅದೇ ಸಂಸ್ಥೆಯ ಗೌರವ ಸಲಹೆಗಾರನಾಗಿ ನಿವೃತ್ತರಾಗಿದ್ದರು. 80ರ ದಶಕದಲ್ಲಿ ಸಿದ್ಧ ಸೂತ್ರದ ಜಾಹೀರಾತುಗಳ ಪ್ರಭಾವ ದಟ್ಟವಾಗಿದ್ದ ಕಾಲಕ್ಕೆ ಈ ಕ್ಷೇತ್ರಕ್ಕೆ ಕಾಲಿಟ್ಟ ಪಾಂಡೆ ಹಿಂದಿ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಹೊಸತನದ ಜಾಹೀರಾತು ನಿರ್ಮಿಸಿ ಉದ್ಯಮಗಳ ಮತ್ತು ಬ್ರಾಂಡ್ ಗಳ ಯಶಸ್ಸಿಗೆ ಅಮೂಲ್ಯ ಕೊಡುಗೆ ನೀಡಿದ್ದರು.
2019ರಲ್ಲಿ ಬಿಜೆಪಿಯ “ಅಬ್ ಕಿ ಬಾರ್ ಮೋದಿ ಸರ್ಕಾರ್” ಎಂಬ ಪಿಆರ್ ಕ್ಯಾಂಪೇನ್ ಸೃಷ್ಟಿಸಿದ್ದು ಇವರ ಸೃಜನತೆಗೆ ಕನ್ನಡಿ. ಉದ್ಯೋಗಕ್ಕೆ ಸೇರಿದ ಕಂಪೆನಿಯಲ್ಲಿ ಭಡ್ತಿ ಪಡೆಯುತ್ತಾ ಕಡೆಗೆ ಅದೇ ಸಂಸ್ಥೆಗೆ ಸಲಹೆಗಾರನಾದದ್ದು ಇವರ ಸಾಧನೆ.








