- ಒಂದೊಂದು ಜನಾಂಗದ ಸಾಂಪ್ರದಾಯಿಕ ಅಡುಗೆಗೂ ಸ್ವಾದಿಷ್ಟ ರುಚಿ ಬೇಧಗಳಿವೆ. ಅದಕ್ಕೊಂದು ಸಾಂಸ್ಕೃತಿಕ ಹಿನ್ನೆಲೆಯೂ ಇದು. ಆಧುನಿಕ ಕಾಲದಲ್ಲಿ ನೆಲಮೂಲ ಪರಂಪರೆಯ ದೇಸೀತನದ ತಾಜಾ ಅಡುಗೆಗಳ ರುಚಿ ವೖವಿಧ್ಯ ಕಾಣೆಯಾಗುತ್ತಿವೆ.

ಕಿನ್ನಿಂಗಾರು : ಬಂಟ ಮಹಿಳಾ ಸಂಘ ಬೆಳ್ಳೂರು ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ 13ನೇ ಕಾರ್ಯಕ್ರಮವಾಗಿ ಬಂಟ ಅಡುಗೆ ಸ್ಪರ್ಧೆ ಸ್ವಾದಿಷ್ಟತೆಯ ಸವಿಯನ್ನು ಉಣ ಬಡಿಸಿತು. ಪಿಂಡಗ ದಿ|ರಾಮ್ ಮೋಹನ್ ರೈಯವರ ಮನೆ ಪಿಂಡಗ ಕೃಷ್ಣನಿವಾಸದಲ್ಲಿ ಜರಗಿದ ಕಾರ್ಯಕ್ರಮವನ್ನು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರಕಾರದ ಸದಸ್ಯೆ ಮಲ್ಲಿಕಾ ಪಕ್ಕಳ ಉದ್ಘಾಟಿಸಿದರು ಬಂಟ ಮಹಿಳಾ ಸಂಘದ ಅಧ್ಯಕ್ಷೆ ಡಾ. ವಿದ್ಯಾಮೋಹನ್‌ದಾಸ್ ರೈ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು.

ಕಾಸರಗೋಡು ಜಿಲ್ಲಾ ಬಂಟರ ಸಂಘ ಉಪಾಧ್ಯಕ್ಷೆ ಶ್ಯಾಮಲಾ ಶೆಟ್ಟಿ,ಬಂಟ ಮಹಿಳಾ ಸಂಘ, ಪುತ್ತೂರು ಅಧ್ಯಕ್ಷೆ ಗೀತಾ ಮೋಹನ್ ರೈ, ಚಲನಚಿತ್ರ ನಟಿ ಭವ್ಯಶ್ರೀ ರೈ ಮುಖ್ಯ ಅತಿಥಿಗಳಾಗಿದ್ದರು.ಜಯಲಕ್ಷ್ಮಿ ಕೆ.ಶೆಟ್ಟಿ ಕಳ್ವಾಜೆ,ಸುಜಾತ ರಾಮ್ ಮೋಹನ್ ರೈ ಪಿಂಡಗ ಉಪಸ್ಥಿತರಿದ್ದರು.ಬಳಿಕ ನಡೆದ ಸಮಾರೋಪ ಸಮಾರಂಭವನ್ನು
ಜಿಲ್ಲಾ ಬಂಟರ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕುಳೂರು ಕನ್ಯಾನ ಡಾ| ಸದಾಶಿವ ಶೆಟ್ಟಿ ಉದ್ಘಾಟಿಸಿದರು

ಬಂಟರ ಸಂಘ ಬೆಳ್ಳೂರು ಇದರ ಅಧ್ಯಕ್ಷ ಮನಮೋಹನ್ ರೈ ಪಿಂಡಗ ಅಧ್ಯಕ್ಷತೆವಹಿಸಿದ್ದರು.ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಬಂಟರ ಸಂಘದ ಜಿಲ್ಲಾಧ್ಯಕ್ಷ ನ್ಯಾ. ಸುಬ್ಬಯ್ಯ ರೈ, ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಜದಗುತ್ತು, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು, ಮಂಜೇಶ್ವರ ಫಿರ್ಕಾ ಬಂಟರ ಸಂಘದ ಪ್ರಭಾರ ಅಧ್ಯಕ್ಷೆ ರಮಾ ರಂಜಿನಿ ಭಂಡಾರಿ, ಚಲನಚಿತ್ರ ನಟ ಸುರೇಶ್ ರೈ ಬೈಲುಗುತ್ತು ಬಜ ಮೊದಲಾದವರು ಪಾಲ್ಗೊಂಡಿದ್ದರು.
ಶ್ಯಾಮಲಾ ಎಸ್.ರೈ ಪ್ರಾರ್ಥನೆ ಹಾಡಿದರು. ಲತಾ ಸುಂದರ್‌ರಾಜ್ ರೈ ಸ್ವಾಗತಿಸಿ , ಶ್ರುತಿ ಸಬ್ರುಕಜೆ ನಿರೂಪಿಸಿದರು. ವಿವಿಧ ಮನೋರಂಜನಾ ಕಾರ್ಯಕ್ರಮ, ಸ್ಪರ್ಧೆಗಳು ನಡೆಯಿತು









