72
ಕೊಚ್ಚಿ: ಕೆನಿಯಾ ದ ಮಾಜಿ ಪ್ರಧಾನಮಂತ್ರಿ ರೆಯ್ಲಾ ಒಡಿಂಗ ಕೇರಳದಲ್ಲಿಹೃದಯಸ್ತಂಭನದಿಂದ ಮೃತಪಟ್ಟರು. ಆಯುರ್ವೇದ ಚಿಕಿತ್ಸೆಗಾಗಿ ಕೇರಳದ ಎರ್ನಾಕುಹಂ ಜಿಲ್ಲೆಯ ಕೂತಾಟುಕುಳಂ ಗೆ ಅವರು ಆಗಮಿಸಿದ್ದರು. ಇಂದು ಬೆಳಿಗ್ಗೆ ಪ್ರಭಾತ ನಡಿಗೆಗೆ ಹೊರಟಾಗ ಹೃದಯಸ್ತಂಭನ ಉಂಟಾಯಿತು. ಅವರ ಜತೆ ಅವರ ಮಗಳು ಮತ್ತು ಸಂಬಂಧಿಕರಿದ್ದರು.

ಕೂತಾಟುಕುಳಂ ಶ್ರೀಧರೀಯಂ ಗೆ ಆಯುರ್ವೇದ ಚಿಕಿತ್ಸೆಗಾಗಿ ಅವರಾಗಮಿಸಿದ್ದರು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೇಡಿಯೋ ಭಾಷಣ ಮನ್ ಕೀ ಬಾತ್ ನಲ್ಲಿ ಕೆನಿಯಾ ಮಾಜಿ ಪ್ರಧಾನಿ ಕೇರಳಕ್ಕೆ ಆಯುರ್ವೇದ ಚಿಕಿತ್ಸೆಗೆ ಆಗಮಿಸಿರುವುದನ್ನು ಉಲ್ಲೇಖಿಸಲಾಗಿತ್ತು.
ಒಡಿಂಗಾ ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸುವುದಕ್ಕೆ ಶಿಷ್ಟಾಚಾರ ವಿಧೇಯ ಭಾರತೀಯ ರಾಯಭಾರಿ ಕಚೇರಿ ನಿರ್ವಹಿಸಲಿದೆ.
ಈ ಹಿಂದೆ ಕೇರಳದ ಇದೇ ಆಸ್ಪತ್ರೆಯಲ್ಲಿ ಒಡಿಂಗ ಅವರು ಕಣ್ಣಿನ ಚಿಕಿತ್ಸೆ ಪಡೆದು ದೃಷ್ಟಿ ಮರಳಿ ಪಡೆದೀದ್ದರು.








