ಕಾಸರಗೋಡು: ಪ್ರೀತಿಯ ನಾಟಕವಾಡಿ ಲೖಂಗಿಕ ಸಂಬಂಧ ನಡೆಸಿ, ವೀಡಿಯೋ ತೋರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ : ಇಬ್ಬರ ಬಂಧನ

by Narayan Chambaltimar

ಕಾಸರಗೋಡು :ಹುಡುಗಿ ಜತೆ ಪ್ರೀತಿಯ ನಾಟಕವಾಡಿ, ಸಲುಗೆಯ ಸ್ನೇಹಸಂಬಂಧ ಬೆಳೆಸಿದ ನಂತರ ಆಕೆಯ ಜತೆ ಲೖಂಗಿಕ ದೌರ್ಜನ್ಯ ನೀಡಿದ್ದಲ್ಲದೇ ಅಶ್ಲೀಲ ವೀಡಿಯೋ ಚಿತ್ರೀಕರಿಸಿ, ಬೆದರಿಕೆಯೊಡ್ಡಿ ಹಣಕ್ಕೆ ಒತ್ತಾಯಿಸಿದ ಪ್ರಕರಣ ನಡೆದಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.


ಕೋಳಿಯಡ್ಕ ನಿವಾಸಿ ಹಾಗೂ ವಿದ್ಯಾನಗರ ಬಿ. ಸಿ. ರೋಡಿನಲ್ಲಿ ವಾಸಿಸುವ ಕೆ. ಎಂ. ಮುಹ್ಮದ್ ಅಫ್ರೀದ್ (23) ಹಾಗೂ ಈತನಿಗೆ ಸಹಾಯ ಮಾಡಿದ ಜೊತೆಗಾರ ಅಣಂಗೂರು ಸುಲ್ತಾನ್ ನಗರದ ಬದಿರ ನಿವಾಸಿ ಬಿ. ಎಂ. ಅಬ್ದುಲ್ ಖಾದರ್ (28)ಎಂಬಿವರನ್ನು ಮೇಲ್ಪರಂಬ ಪೋಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ 2019ರಿಂದ ಹುಡುಗಿ ಜತೆ ಸ್ನೇಹ ಸಂಬಂಧ ಬೆಳೆಸಿದ ಆರೋಪಿ ಅನಂತರ ಆಕೆಯ ಜತೆ ಹಲವೆಡೆ ಸುತ್ತಾಡಿ, ಆಕೆಯನ್ನು ತನ್ನ ಲೖಂಗಿಕ ತೃಷೆಗೆಬಳಸಿಕೊಂಡಿದ್ದನು. ಇದರ ಫೋಟೋ, ವೀಡಿಯೋ ಚಿತ್ರೀಕರಿಸಿದ ಆರೋಪಿ ಆ ಬಳಿಕ ಇದನ್ನು ತೋರಿಸಿ ಹಣಕ್ಕಾಗಿ ಬ್ಲೇಕ್ಮೇಲ್ ಮಾಡಿದನೆಂದು ಆರೋಪಿಸಲಾಗಿದೆ. ಈತ ಈಗಾಗಲೇ ಆಕೆಯಿಂದ 22ಗ್ರಾಂ ಚಿನ್ನ ಲಪಟಾಯಿಸಿದ್ದನೆಂದು ಹೇಳಲಾಗಿದೆ.
ಸಂತ್ರಸ್ಥ ಹುಡುಗಿ ತಂದೆ ಮೇಲ್ಪರಂಬ ಪೋಲೀಸರಿಗೆ ನೀಡಿದ ದೂರಿನಂತೆ ಕೇಸು ದಾಖಲಿಸಲಾಯಿತು. ಬಳಿಕ ಆರೋಪಿಗಳಿಗೆ ಹಣ ನೀಡುವುದಾಗಿ ಹುಡುಗಿಯ ತಂದೆಯಿಂದ ಫೋನ್ ಕರೆ ಮಾಡಿ ಕರೆಸಿ ಆರೋಪಿಗಳನ್ನು ಬಂಧಿಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00