Breaking News
——————
ಕುಂಬಳೆ : ಕುಂಬಳೆಯ ಡಿವೈಎಫ್ಐ ಪ್ರಮುಖ ನಾಯಕಿ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆ, ಖ್ಯಾತ ಯುವ ನ್ಯಾಯವಾದಿ ಕುಂಬಳೆ ನಿವಾಸಿ ರಂಜಿತಾ (34) ಕುಂಬಳೆ ಪೇಟೆಯ ತನ್ನ ಕಛೇರಿಯೊಳಗೆ ಸಂಜೆ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ನ
ಪೇಟೆಯ ಕೊಟ್ಟೂಡಲ್ ಕಾಂಪ್ಲೆಕ್ಸ್ ಕಟ್ಟಡದ ತನ್ನ ಕಚೇರಿಯನ್ನು ಒಳಗಿಂದ ಬಾಗಿಲು ಜಡಿದು ಸಂಜೆ 5.15ರ ಅಂದಾಜಿಗೆ ಅವರು ಆತ್ಮಹತ್ಯೆ ನಡೆಸಿರುವ ಕುರಿತು ವರದಿಯಾಗಿದೆ.

ಡಿವೈಎಫ್ಐ ಬ್ಲಾಕ್ ಘಟಕ ಖಜಾಂಜಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಅವರು ಕುಂಬಳೆ ಪ್ರದೇಶದಿಂದ ಸಿಪಿಐ ಎಂ ನ ಸಮರ್ಥ, ಪ್ರಗಲ್ಭ ನಾಯಕಿಯಾಗಿ ಬೆಳೆದು ಬರುತಿದ್ದರು. ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು ತನ್ನ ವೈಯ್ಯಕ್ತಿಕ ಕಾರಣ ಆತ್ಮಹತ್ಯೆಗೆ ಪ್ರೇರಕ ಎಂಬ ಬರಹ ಸಿಕ್ಕಿದೆ.
ಆತ್ಮಹತ್ಯೆಗೆ ಕ್ಷಣ ಮೊದಲು ಪಕ್ಷದ ನಾಯಕರೊಬ್ಬರಿಗೆ ಕರೆ ಮಾಡಿ ಆತ್ಮಹತ್ಯೆ ಸುಳಿವು ನೀಡಿದ್ದಳೆಂಬ ಮಾಹಿತಿ ಇದೆ.
ಪಕ್ಷದ ಸಂಘಟನಾ ಕಾರ್ಯಕ್ರಮ, ಸಭೆ ನಿಮಿತ್ತ ಸಂಜೆ 5ರ ತನಕವೂ ಕಾರ್ಯಕರ್ತರನ್ನು ಸಂಪರ್ಕಿಸಿ ಲವಲವಿಕೆಯಿಂದ ಮಾತಾಡಿದ್ದ ಅವರು ದಿಢೀರನೆ ಆತ್ಮಹತ್ಯೆ ಮಾಡಿರುವುದು ಪಕ್ಷ ಸಂಘಟನಾ ಕಾರ್ಯಕರ್ತರನ್ನು ನಿಬ್ಬೆರಗಾಗಿಸಿದೆ. ಇವರ ಸಹೋದರ ಸಕ್ರಿಯ ಸಿಪಿಐ ಎಂ ಕಾರ್ಯಕರ್ತ, ರಿಕ್ಷಾ ಚಾಲಕ ಅಜಿತ್ ನಾಲ್ಕೈದು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದನು. ಮೃತಳು ಪತಿ ಮತ್ತು ಮಗುವನ್ನು ಅಗಲಿದ್ದಾಳೆ. ವಕೀಲೆ ರಂಜಿತಾಳ ಆತ್ಮಹತ್ಯೆ ಸಿಪಿಐ ಎಂ ಮತ್ತು ಡಿವೈಎಫ್ಐ ಸಹಿತ ಪೋಷಕ ಸಂಘಟನೆಗೆ ಬಲುದೊಡ್ಡಹೊಡೆತವಾಗಿದೆ.
ಮೃತದೇಹ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆ ಶವಾಗಾರದಲ್ಲಿದೆ.





