ವರ್ಕಾಡಿ : ಸ್ಥಳೀಯಾಡಳಿತ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ :ವಾರ್ಡು ಸಮಿತಿಗೆ ಮತದಾರರ ಪಟ್ಟಿ ಹಂಚಿಕೆ

by Narayan Chambaltimar

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ವಾರ್ಡು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಕರ್ತವ್ಯಕ್ಕೆ ಹೊರಟಿದೆ.
ಪಕ್ಷದ ಗೃಹ ಸಂಪರ್ಕ ಸಹಿತ ಮತದಾರರ ಭೇಟಿಗೆ ಚಾಲನೆಯಾಗಿದೆ.

ವರ್ಕಾಡಿ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಮತದಾರರ ಪಟ್ಟಿಯನ್ನು ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಂಚುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವರ್ಕಾಡಿ ಮಂಡಲ ಅಧ್ಯಕ್ಷ ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ.,
U. D.F.ಅಧ್ಯಕ್ಷ ಮಜಲ್ ಮಹಮ್ಮದ್. ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಣೇಶ್ ಪಾವೂರು., ಕಾರ್ಯದರ್ಶಿ ವಸಂತ ರಾಜ್, ಸದಾಶಿವ, ಆಜೀಸ್ ಕಲ್ಲೂರು, ಮಹಮ್ಮದ್ ಕೆದುoಬಾಡಿ ಮೊದಲಾದ ನಾಯಕರು, ಕಾರ್ಯಕರ್ತರು ಭಾಗವಹಿಸಿದರು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00