601
ಮಂಜೇಶ್ವರ: ನಿನ್ನೆರಾತ್ರಿ ಮನೆಯಲ್ಲಿ ಮಲಗಿ ನಿದ್ರಿಸಿದ್ದ ಮಹಿಳೆಯ ಮೃತದೇಹ ಮನೆಯಂಗಳದ ಬಾವಿಯಲ್ಲಿ ಇಂದು ಪತ್ತೆಯಾಗಿದೆ.
ಮೀಂಜ ಮೀಯಪದವು ಅಡ್ಕದಗುರಿ ನಿವಾಸಿ ಐರಿನ್ ಡಿ ಸೋಜ (60) ಮೃತ ಮಹಿಳೆಯಾಗಿದ್ದಾರೆ.
ಉಪ್ಪಳ ಅಗ್ನಿಶಾಮಕ ಘಟಕದವರು ತೆರಳಿ ಮೃತದೇಹ ಮೇಲಕ್ಕೆತ್ತಿದ್ದು, ಬಳಿಕ ಪೋಸ್ಟ್ ಮಾರ್ಟಂ ಗೆ ಕಳುಹಿಸಿದರು. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ದಿ. ರೋಕಿ ಡಿ ಸೋಜ ಅವರ ಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ ಜೋಯ್, ಜೋಸ್ನಿ, ಅಳಿಯ ಸಂದೇಶ್ ಎಂಬಿವರನ್ನಗಲಿದ್ದಾರೆ.






