1.2K
ಮಂಜೇಶ್ವರ : ಓಣಂ ಹಬ್ಬದ ಸುದಿನ(ಸೆ.5) ಮಧ್ಯಾಹ್ನದ ಮೇಲೆ ವೃದ್ಧ ವ್ಯಕ್ತಿಯೊಬ್ಬರು ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀಯಪದವಿನಲ್ಲಿ ನಡೆದಿದೆ.
\ಮೀಯಪದವಿನ ಮದಂಗಲ್ಲು ನಿವಾಸಿ ಸುಬ್ರಾಯ ಭಟ್ (86)ಎಂಬವರು ಮೃತ ವ್ಯಕ್ತಿಯಾಗಿದ್ದಾರೆ.
ಶುಕ್ರವಾರ ಅಪರಾಹ್ನ ಸ್ವಗೃಹದಲ್ಲಿ ಈ ಘಟನೆ ನಡೆದಿದೆ.
ಸುಬ್ರಾಯ ಭಟ್ ಮತ್ತು ಪತ್ನಿ ರಾಜಮ್ಮಾಳ್ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ ತೀವ್ರ ಅನಾರೋಗ್ಯ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆತ್ಣಹತ್ಯೆ ನಡೆದಿದೆ ಎನ್ನಲಾಗಿದೆ
ಈ ಸಂಬಂಧ ಹೆಚ್ಚುವರಿ ತನಿಖೆ ನಡೆಯುತ್ತಿದೆ ಎಂದು ಮಂಜೇಶ್ವರ ಪೋಲೀಸರು ತಿಳಿಸಿದ್ದಾರೆ.






