ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಒಣಂ ಹಬ್ಬಾಚರಣೆ

by Narayan Chambaltimar

ಬಾಯಾರು: ಇಲ್ಲಿನ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಸೆ. 4ರಂದು ರಂದು ಓಣಂ ಹಬ್ಬವನ್ನು ಸಮತೆ, ಮಮತೆಗಳ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಆರಂಭದಲ್ಲಿ ವಿದ್ಯಾರ್ಥಿಗಳು ಓಣಂ ಆಚರಣೆಯ ಮಹತ್ವದ ಮಾತಿನೊಂದಿಗೆ ಪ್ರಾರಂಭವಾಯಿತು. ಸೊಗಸಾದ ಓಣಂ ಪೂಕಳಂ ರಚಿಸಿದ ಅಲಂಕೃತ ವೇದಿಕೆಯಲ್ಲಿ ಈ ತಿಂಗಳ ಮಾಸಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು.
ಪೆಲತ್ತಡ್ಕ ರಾಮಕೃಷ್ಣ ಭಟ್ ,ವ್ಯವಸ್ಥಾಪಕರಾದ ಎಚ್ ಮಹಾಲಿಂಗ ಭಟ್ , ಟ್ರಸ್ಟ್ ಸದಸ್ಯರಾದ ಪಯ್ಯರಕೋಡಿ ಸದಾಶಿವ ಭಟ್ , ಶಾಲಾ ಪ್ರಾಂಶುಪಾಲರಾದ ವಾಮನನ್,ಮಾರ್ಗದರ್ಶಕರಾದ ಕೃಷ್ಣ ನಾಯಾಕ್ ಶುಭಾಶಂಸನೆಗೈದರು.

ಓಣಂ ಹಬ್ಬದ ಮೆರುಗು ಹೆಚ್ಚಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ನೃತ್ಯ, ತಿರುವಾದಿರ, ವಾಂಜಿಪಾ ಟ್,ಸಂಗೀತ ಹಾಗೂ ಮಹಾಬಲಿ ವಾಮನ ಅವತಾರದ ದೃಶ್ಯ ಪ್ರದರ್ಶನ ಮೂಲಕ ಓಣಂ ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಕಾರ್ಯಕ್ರಮ ವನ್ನು ಕನ್ನಡ ಶಿಕ್ಷಕ ನಿತ್ಯಾನಂದ ಕೆ ಆರ್ ಬೇಕೂರು ನಿರೂಪಿಸಿ ವಂದನಾರ್ಪಣೆಗೈದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00