180
ಕುಂಬಳೆ : ಸ್ಥಳೀಯಾಡಳಿತ ಪೂರ್ವಭಾವಿಯಾಗಿ ಕಾಂಗ್ರೆಸ್ ಪಕ್ಷದ ವಾರ್ಡು ಸಮಿತಿಗಳ ಗೃಹ ಸಂಪರ್ಕ ಅಭಿಯಾನ ಕುಂಬಳೆಯಲ್ಲಿ ಆರಂಭಗೊಂಡಿತು.
ಕುಂಬಳೆ ಗ್ರಾ. ಪಂ. 5ನೇ ವಾರ್ಡು ಉಜಾರಿನಲ್ಲಿ ಸಿಕ್ಕ ಎಂಬವರ ಮನೆಯಲ್ಲಿ ನಡೆದ ಗೃಹಸಂಪರ್ಕ ಮತ್ತು ಕರಪತ್ರ ವಿತರಣ ಅಭಿಯಾನವನ್ನು ಲೋಕನಾಥ ಶೆಟ್ಟಿ ಉದ್ಘಾಟಿಸಿದರು.

ಗೃಹಿಣಿ ಸೀತಕ್ಕ ಅಧ್ಯಕ್ಷತೆವಹಿಸಿದರು. ಕೆಪಿಸಿಸಿ ಕರೆಯಂತೆ ಕೇರಳ ವ್ಯಾಪಕ ಕಾಂಗ್ರೆಸ್ ಬೂತ್ ಘಟಕಗಳಿಗೆ ಪುನರುತ್ತೇಜನ ನೀಡಲು ಗೃಹ ಸಂಪರ್ಕದ ಮೂಲಕ ಜನ ಸಂಪರ್ಕ ನಡೆಸಲು ಕರೆ ನೀಡಲಾಗಿದೆ.
ಕುಂಬಳೆ ಮಂಡಲ ಕಾಂಗ್ರೆಸ್ ಘಟಕ ಅಧ್ಯಕ್ಷ ರವಿ ಪೂಜಾರಿ, ಗ್ರಾ. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕೃಷಿಕ ಕಾಂಗ್ರೆಸ್ ನಾಯಕ ಗಣೇಶ್ ಭಂಡಾರಿ, ನ್ಯಾಯವಾದಿ ಶಿವರಾಮ ಆಳ್ವ, ಡಾಲ್ಫಿನ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು. ವಸಂತ ಬಂಬ್ರಾಣ ಸ್ವಾಗತಿಸಿದರು.
ಹಲವಾರುಮಹಿಳೆಯರು, ನಾಗರಿಕರು ಪಾಲ್ಗೊಂಡರು.








