ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಶಾಲಾ ಅಡುಗೆ ತಯಾರಕರಿಗೆ ಏಕದಿನ ಅಭ್ಯಾಸವರ್ಗ

ಮಕ್ಕಳ ಆರೋಗ್ಯ ಕಾಪಾಡುವ ಮಹತ್ತರ ಹೊಣೆ ಶಾಲಾ ಅಡುಗೆಯಮ್ಮಂದಿರಿಗಿದೆ - ಕೆ. ಆರ್. ಜಯಾನಂದ

by Narayan Chambaltimar

ಮಂಜೇಶ್ವರ: ಉಪಜಿಲ್ಲಾ ಮಟ್ಟದ ಶಾಲಾ ಅಡುಗೆ ತಯಾರಕರ ಒಂದು ದಿನದ ತರಬೇತಿ ಕಾರ್ಯಕ್ರಮ ಸೆ. ರಂದು ಜಿ. ಹೆಚ್. ಎಸ್. ಉಪ್ಪಳ ಶಾಲೆಯಲ್ಲಿ ಜರಗಿತು. ತರಬೇತಿ ಶಿಬಿರವನ್ನು
ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಕೆ.ಆರ್. ಜಯಾನಂದ ಉದ್ಘಾಟಿಸಿದರು.

ಕ ಮಾತನಾಡಿದ ಅವರು ಶಾಲೆಯ ದೈನಂದಿನ ಅಡುಗೆ ಕಾರ್ಯಕ್ರಮದಲ್ಲಿ ಅಡುಗೆ ಅಮ್ಮನವರ ಪಾತ್ರ ಮಹತ್ತರವಾಗಿದೆ ಎಂದರು. ಶಾಲೆಯಲ್ಲಿ ಶುಚಿ ರುಚಿಯಾದ ಅಡುಗೆಯನ್ನು ಮಾಡುವ ಮೂಲಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು ಎಂದು ಕರೆಕೊಟ್ಟರು. ಆದಷ್ಟು ತರಕಾರಿಗಳನ್ನು ನಮ್ಮ ಹಿತ್ತಲಿ ನಲ್ಲೇ ಬೆಳೆಸುವ ಮೂಲಕ ನಮ್ಮ ಮುಂದಿನ ಪೀಳಿಗೆಯ ಆರೋಗ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಕೂಡ ನಮಗಿದೆ ಎಂದರು. ಅಡುಗೆ ಸಾಮಾಗ್ರಿಗಳನ್ನು , ತರಕಾರಿಗಳನ್ನು, ಅಕ್ಕಿಯನ್ನು ಹೆಚ್ಚು ತೊಳೆದು ಉಪಯೋಗಿಸಿದಲ್ಲಿ ನಮ್ಮ ಆರೋಗ್ಯದ ಹಿತ ವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಒಟ್ಟಾರೆಯಾಗಿ ಒಂದು ಸುಂದರ, ಸ್ವಾಸ್ಥ್ಯ ಸಮಾಜವನ್ನು ರೂಪಿಸುವಲ್ಲಿ ಶಾಲೆಗಳ ಅಡುಗೆ ಅಮ್ಮನವರ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆಕೊಟ್ಟರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ. ಹೆಚ್. ಎಸ್. ಉಪ್ಪಳ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ತರಬೇತುದಾರರೂ ಮುಖ್ಯೋಪಾಧ್ಯಾಯರೂ ಆದ ಸುಬ್ರಹ್ಮಣ್ಯ ಕೆ, ಮಂಜೇಶ್ವರ ಉಪಜಿಲ್ಲಾ ನೂನ್ ಮಿಲ್ ಆಫೀಸರ್ ಪ್ರದೀಪ್ ಕುಮಾರ್ ಬಿ. , ಅಭಿಲಾಷ್ ವಿ. ಉಪಸ್ಥಿತರಿದ್ದರು.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00