ಪೆರ್ಣೆ : ನಿತ್ಯ ಕನ್ನಿಕೆ ಶ್ರೀ ಮುಚ್ಚಿಲೋಟಮ್ಮ ಆಲ್ಬಂ ಹಾಡಿನ ಲೋಕಾರ್ಪಣೆ: ಪುಟಾಣಿ ಗಾಯಕ ಮಾ. ವಿಹಾನ್ ಲೋಹಿತ್ ಗಾನಪಯಣಕ್ಕೆ ಗಣ್ಯರ ಪ್ರಶಂಸೆಯ ಆಶೀರ್ವಾದ

by Narayan Chambaltimar

ಕುಂಬಳೆ : ಗಡಿನಾಡಿನ ವಾಣಿಯ-ಗಾಣಿಗ ಸಮಾಜದ ಆರಾಧ್ಯ ಕ್ಷೇತ್ರ ಪೆರ್ಣೆಯ ಅಧಿದೈವ ಶ್ರೀ ಮುಚ್ಚಿಲೋಟ್ ಭಗವತಿಯಮ್ಮನನ್ನು ಸ್ತುತಿಸಿ ಕೊಂಡಾಡುವ, 9ರ ಹರೆಯದ ಎಳೆ ಪ್ರತಿಭಾವಂತ ಬಾಲಕ ಮಾ. ವಿಹಾನ್ ಲೋಹಿತ್ ಪುತ್ತೂರು ಹಾಡಿದ ಆಲ್ಬಂ ಗೀತೆ “ನಿತ್ಯ ಕನ್ನಿಕೆ ಶ್ರೀ ಮುಚ್ಚಿಲೋಟಮ್ಮ” ಹಾಡು ಪೆರ್ಣೆಯಲ್ಲಿ ಲೋಕಾರ್ಪಣೆಗೊಂಡಿತು.
ಅನಿವಾಸಿ ಉದ್ಯಮಿ, ದಾನಿ ಶಿವಶಂಕರ ನೆಕ್ರಾಜೆಯವರ ಪೆರ್ಣೆಯ ನಿವಾಸ ‘ಸಾಯಿತನ್ವಿ’ಯಲ್ಲಿ ನಡೆದ
ಬಣ್ಣದ ಮಹಾಲಿಂಗ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಸಮಾಜ ಬಾಂಧವರು ಮತ್ತು ಗಣ್ಯರ ಶುಭಾಶೀರ್ವಾದಗಳ ಹಾರೈಕೆಯೊಂದಿಗೆ ಹಾಡಿನ, ಬಿಡುಗಡೆ ನಡೆಯಿತು.

ಉದ್ಯಮಿ ಶಿವಶಂಕರ ನೆಕ್ರಾಜೆ ಆಲ್ಬಂ ಬಿಡುಗಡೆ ಮಾಡಿ ಮಾತನಾಡುತ್ತಾ “ವಾಣಿಯ-ಗಾಣಿಗ ಸಮಾಜದಿಂದ ಗಡಿನಾಡಿನಲ್ಲಿ ಪ್ರತಿಭೆಗಳು ಉದಯಿಸಿ ಬೆಳಗಬೇಕೆಂದೂ, ತನ್ಮೂಲಕ ಸಮಾಜದ ಕೀರ್ತಿ ಹರಡಬೇಕೆಂದೂ ಆಶಿಸಿ ಎಳೆಯ ಗಾನಪ್ರತಿಭೆ ಬಾಲಕ ಮಾ. ವಿಹಾನ್ ಗೆ ಉತ್ತರೋತ್ತರ ಶ್ರೇಯಸನ್ನು ಕೋರಿ, ಬೆಂಬಲ ಘೋಷಿಸಿದರು.
ಸಮಾರಂಭದಲ್ಲಿ ಬಾಲಪ್ರತಿಭೆ ಮಾ. ವಿಹಾನ್ ಗಾಯನದ ಆಲ್ಬಂ ಗೀತೆಯ ಪ್ರದರ್ಶನವಾಯಿತು. ತನ್ಮೂಲಕ ಎಲ್ಲರ ಪ್ರಶಂಸೆಗಳನ್ನು ಪಡೆದ ಬಾಲಕನನ್ನು
ವೇದಿಕೆಯ ಗಣ್ಯರ ಸಮಕ್ಷಮ
ಪೆರ್ಣೆ ಕ್ಷೇತ್ರದ ಯಜಮಾನ, ಕವಿ ಶ್ರೀಕೃಷ್ಣಯ್ಯ ಅನಂತಪುರ ಗೌರವಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮ ಮತ್ತು ಆಲ್ಬಂ ಪ್ರಾಯೋಜಕ ಶಿವಶಂಕರ ನೆಕ್ರಾಜೆ ಅವರೊಂದಿಗೆ ಪತ್ನಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದು, ಪ್ರಮುಖರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಆಲ್ಬಂ ನಿರ್ದೇಶಿಸಿದ, ಸಿನಿಮ ನಿರ್ದೇಶಕ ಅಕ್ಷಯ್ ನಾಯಕ್ ಕರೋಪಾಡಿ, ನೃತ್ಯ ನಿರ್ದೇಶಕಿ, ವಿದುಷಿ ನಯನಾ ವಿ ರೈ, ಗಾಯಕನಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ವಿದುಷಿ ರಮಾ ಪ್ರಭಾಕರ್, ಆಲ್ಬಂಗೆ ನೃತ್ಯ ಪ್ರದರ್ಶನವಿತ್ತ ಗಾಯಕ ನ ತಾಯಿ, ನರ್ತಕಿ ರಂಜಿನಿ ಲೋಹಿತ್, ಸಹ ನರ್ತಕಿಯರಾದ ಆಂಗಿಕಾ ಶೆಟ್ಟಿ, ಸ್ತುತಿ ರೈ, ವಸುಧಾ ಬಿ
ಮತ್ತು ಗೀತೆ ರಚಿಸಿ, ಗಾನ ಸಂಯೋಜಿಸಿ ಮಾರ್ಗನಿರ್ದೇಶನವಿತ್ತ ಗಾಯಕ ರತ್ನಾಕರ ಎಸ್. ಓಡಂಗಲ್ಲು ಉಪಸ್ಥಿತರಿದ್ದರು.
ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00