381
ಮಂಜೇಶ್ವರ :ಮಂಗಳೂರಿನಿಂದ ಕಾಸರಗೋಡಿಗೆ ಬರುವ ಬಸ್ಸಿನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 96 ಪವನ್ ಚಿನ್ನಾಭರಣಗಳನ್ನು ಆದಿತ್ಯವಾರ ಸಂಜೆ ವಶ ಪಡಿಸಿ ಓರ್ವನನ್ನು ಬಂಧಿಸಲಾಗಿದೆ.
ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ 762 ಗ್ರಾಂ ತೂಕ ಚಿನ್ನಾಭರಣಗಳನ್ನು ದಾಖಲೆ ರಹಿತವಾಗಿ ಸಾಗಿಸಲಾಗುತಿತ್ತು.
ಈ ಸಂಬಂಧ ಮುಂಬೈ ಸಿಟಿಯ
ತವಕ್ಕಲ್ ಬಿಲ್ಡಿಂಗ್ ನಲ್ಲಿ ವಾಸಿಸುವ ಮೂಜಾಸರ್ ಹುಸೈನ್ ಎಂಬಾತನನ್ನು ಬಂಧಿಸಲಾಗಿದೆ.
ನಿನ್ನೆ ಶನಿವಾರವೂ ಸಮಾನ ರೀತಿಯಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 55 ಪವನ್ ಚಿನ್ನಾಭರಣ ವಶ ಪಡಿಸಲಾಗಿತ್ತು. ಮಂಜೇಶ್ವರ ಬಕ್ರಿ ಚೆಕ್ಪೋಸ್ಟ್ ನಲ್ಲಿ ನಡೆದ ಸತತ ಎರಡು ದಿನ ಕಾರ್ಯಾಚರಣೆಯಲ್ಲಿ ಒಟ್ಟು 152 ಪವನ್ ಚಿನ್ನಾಭರಣ ವಶಪಡಿಸಲಾಯಿತು. ಅಬಕಾರಿ ಇನ್ಸ್ಪೆಕ್ಟರ್ ಜಿನು ಜೇಂಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.









