ಸೀತಾಂಗೋಳಿ : ಆಧುನಿಕ ವಿನ್ಯಾಸದ ವಿಲ್ಲಾಸ್ ಪ್ರೋಜೆಕ್ಟ್, ಫುಡ್ ಪ್ರೋಡಕ್ಟ್, ಟೂರಿಸ್ಟ್ ಬಸ್ ಸರ್ವೀಸ್, ಜೆಸಿಬಿ ಕೆಲಸಗಳು ಸೇರಿದಂತೆ ನಾಗರಿಕ ಅಗತ್ಯದ ವಿವಿಧ ಸೇವಾ ಸೌಲಭ್ಯಗಳನ್ನು ಒದಗಿಸುವ ಘೋಷಣೆಯೊಂದಿಗೆ “ಯಮಾಮ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಪ್ರಧಾನ ಕಚೇರಿ ಸೀತಾಂಗೋಳಿ ಬಳಿಯ ಕಟ್ಟತ್ತಡ್ಕದಲ್ಲಿ ಕಾರ್ಯಾರಂಭಗೊಂಡಿತು.
ಸಯ್ಯದ್ ಕೆ. ಎಸ್. ಆಟ್ಟಕೋಯ ತಂಙಳ್ ಕುಂಬೋಲ್ ಅವರು ಪ್ರಾರ್ಥನೆಗೆ ನೇತೃತ್ವ ನೀಡಿ ಸಂಸ್ಥೆಯ ಕಚೇರಿಗೆ ಚಾಲನೆ ನೀಡಿದರು. ಸಯ್ಯದ್ ಹಮೀದ್ ಅನ್ವರ್ ಅಹ್ದುಲ್ ತಂಙಳ್ ಮುಹಿಮ್ಮಾತ್ ನೂತನ ಕಚೇರಿ ಉದ್ಘಾಟಿಸಿದರು.

ಸಯ್ಯದ್ ಅಬ್ದುರಹಿಮಾನ್ ಶಿಖರ್ ಅಲ್ ಬುಖಾರಿ, ಪಿ. ಎಂ. ಎಸ್ ವಿಲ್ಲಾಸ್ ಕನ್ಸೇಷನ್ ವರ್ಕ್ ಪ್ರೋಜೆಕ್ಟ್ ಉದ್ಘಾಟಿಸಿದರು. ಸಯ್ಯಿದ್ ಮುಹಮ್ಮದ್ ತಂಙಳ್ ಗೋಸಾಡ ಯಮಾಮ ಪ್ರೈವೇಟ್ ಲಿ. ಕಂಪೆನಿಯ ಉತ್ಪನ್ನಗಳ ವಿತರಣೋದ್ಘಾಟನೆ ಮಾಡಿದರು. ಯಮಾಮ ಟೂರಿಸ್ಟ್ ಏಂಡ್ ಟ್ರಾವೆಲ್ಸ್ ಹೆಲ್ಪ್ ಡೆಸ್ಕ್ ವಿಭಾಗವನ್ನು ಸೈನುದ್ದೀನ್ ಅಶ್ರಫ್ ಅಲ್ ಖಾದಿರಿ ಕಳತ್ತೂರು ಉಸ್ತಾದ್ ಉದ್ಘಾಟಿಸಿದರು. ಆಹಾರ ಉತ್ಪನ್ನಗಳ ಆನ್ಲೈನ್ ವಿಭಾಗದ ಕಂಪ್ಯೂಟರ್ ಘಟಕವನ್ನು ಪುತ್ತಿಗೆ ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ವಿವಿಧ ರಾಜಕೀಯ ಪಕ್ಷಗಳನ್ನು ಪ್ರತಿನಿಧೀಕರಿಸಿ ಸಿಪಿಐ ಎಂ ನಿಂದ ಸಂತೋಷ್ ಕುಮಾರ್ ಕೆ, ಕಾಂಗ್ರೆಸ್ ನಿಂದ ಅಬ್ದುಲ್ಲ, ಎಂ ಪಿ. ಖಾಲಿದ್ (ಮುಸ್ಲಿಂಲೀಗ್), ಕರೀಂ ಚಂದೇರ (ಎನ್. ಸಿ. ಪಿ), ಉಮಾನಾಥ ಭಂಡಾರಿ (ಬಿಜೆಪಿ), ಷುಕೂರ್ ಕಣಾಜೆ, ಅಶ್ರಫ್ ಪಿ. ಎಂ. ಪಡುಪ್ಪ್, ಯೂಸುಫ್ ಮಿಸ್ಬಾಹಿ, ವೇಣುಗೋಪಾಲ್, ಮುಹಮ್ಮದ್ ಅಂಗಡಿಮೊಗರ್ ಮೊದಲಾದವರು ಮಾತನಾಡಿದರು.
ಯಮಾಮ ಪ್ರೈ. ಲಿಮಿಟೆಡ್ ಕಂಪೆನಿ ಮೇನೇಜಿಂಗ್ ಡಯರೆಕ್ಟರ್ ಆರಿಫ್ (ಆಲ್ಬು), ಅಧ್ಯಕ್ಷತೆ ವಹಿಸಿದರು.
ಯಮಾಮ ಪ್ರೈ. ಲಿ. ಕಂಪೆನಿ ನಿರ್ದೇಶಕ ಪಿ. ಎ. ಸುಬೈರ್ ಪಡುಪ್ಪ್ ಸ್ವಾಗತಿಸಿದರು. ಜಾಫರ್ ಸಿದ್ದೀಖ್ ಎಕೆಜಿ ನಗರ್ ವಂದಿಸಿದರು









