ಕುಂಬಳೆ : ಶಾಸಕರ ನಿಧಿ ಅನುದಾನದಲ್ಲಿ ನಿರ್ಮಿಸಿದ ಕಂಚಿಕಟ್ಟೆ ಮಳಿ ಅರಮನೆ ರಸ್ತೆ ಲೋಕಾರ್ಪಣೆ :ಇದು ಈ ನಾಡಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕೊಡುಗೆ ಎಂದ ಶಾಸಕ ಅಶ್ರಫ್

by Narayan Chambaltimar

ಕುಂಬಳೆ : ಕಂಚಿಕಟ್ಟೆ ಬಳಿಯ ಅರಮನೆ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ಕೊಡುಗೆಯಾಗಿ ಶಾಸಕ ಎಕೆಎಂ ಅಶ್ರಫ್ ನಾಡಿಗೆ ಸಮರ್ಪಿಸಿದರು.
ಶಾಸಕರ ನಿಧಿಯಿಂದ ಐದು ಲಕ್ಷ ರೂ ಮಂಜೂರು ಮಾಡಿ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗಿದ್ದು, ಕಂಚಿಕಟ್ಟೆ ಮಳಿ ಪ್ರದೇಶದ ನೂರಾರು ಮಂದಿಗೆ ಪ್ರಯೋಜನಕಾರಿಯಾಗಿದೆ.

ರಸ್ತೆ ಸೌಲಭ್ಯಗಳು ನಾಗರಿಕರ ಮೂಲಭೂತ ಸೌಕರ್ಯಗಳಾಗಿದ್ದು ಶಾಸಕರ ನಿಧಿಯಿಂದ ಅತ್ಯಲ್ಪ ಅನುದಾನದಲ್ಲಿ ಈ ರಸ್ತೆ ನಿರ್ಮಾಣಗೊಂಡಿದೆ. ಈ ಪ್ರದೇಶಕ್ಕೆ ಶಾಸಕರ ಅನುದಾನದಿಂದ ಮಿನಿಮಾಸ್ಟ್ ಲೈಟ್ ಕೂಡಾ ಒದಗಿಸಲಾಗುವುದೆಂದು ಶಾಸಕರು ಭರವಸೆ ಇತ್ತರು ಕುಂಬಳೆ ಗ್ರಾ. ಪಂ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದರು. ವಾರ್ಡು ಪ್ರತಿನಿಧಿ ಪ್ರೇಮಾವತಿ ಮಾತನಾಡಿ ವಾರ್ಡನ್ ಜನತೆಯ ಬೇಡಿಕೆಯಂತೆ ಈ ರಸ್ತೆಯ ಮುಂದುವರಿದ ಭಾಗಕ್ಕೆ ಗ್ರಾ. ಪಂ ವತಿಯಿಂದಲೂ 5ಲಕ್ಷ ರೂ ಮೀಸಲಿರಿಸಲಾಗಿದೆ ಎಂದರು.
ಗ್ರಾ. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕಾಂಗೈ ನಾಯಕ ರವಿ ಪೂಜಾರಿ, ಸುಂದರ ಆರಿಕ್ಕಾಡಿ, ರಾಮಚಂದ್ರ ಗಟ್ಟಿ,  ಮಡ್ವ ಮಂಜುನಾಥ ಆಳ್ವ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನಾರಾಯಣ ಪೂಜಾರಿ ಸ್ವಾಗತಿಸಿದರು. .

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00