- ಕುಂಬಳೆ : ಕಣಿಪುರ ಕ್ಷೇತ್ರದಲ್ಲಿ ಆ. 18ರಿಂದ. ಹರಿಕೀರ್ತನ ಉತ್ಸವ -15ನೇ ವರ್ಷದ ಹರಿಕಥಾ ಸಪ್ತಾಹ
- ನಶಿಸಿ ಹೋಗುತ್ತಿದ್ದ ವೈಷ್ಣವ ಭಕ್ತಿ ಪರಂಪರೆಯ ಕಲೆಗೆ
‘ಕಣಿಪುರ’ ದಲ್ಲಿ ಕೀರ್ತನ ಕುಟೀರದ ಪುನರುತ್ತೇಜನ
ಒಂದು ಕಾಲಕ್ಕೆ ಯಕ್ಷಗಾನದ ನೆಲೆವೀಡಾಗಿದ್ದ ಕುಂಬಳೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲೀಗ ವರ್ಷಕ್ಕೊಮ್ಮೆಹರಿಕಥಾ ಮಹೋತ್ಸವ ನಡೆಯುತ್ತಿದೆ. ಗಡಿನಾಡಲ್ಲಿ ರೂಪುಗೊಂಡ ಕೀರ್ತನ ಕಲಾವಿದರ ಪಾಲಿಗೆ ಇದೊಂದು ವಾರ್ಷಿಕ ಸಂಭ್ರಮ.
ಜತೆಗೆ ಕ್ಷೀಣಿಸಿದ್ದ ಹರಿಕಥೆ ಎಂಬ ವೈಷ್ಣವ ಭಕ್ತಿಪಥದ ಪುನರುತ್ಥಾನದ ಸಂಕೇತವೂ ಹೌದು. ಕನ್ನಡ ನಾಡಲ್ಲಿ ಎಲ್ಲೂ ಕಾಣದ ಹರಿಕಥಾ ಸಂಕೀರ್ತನ ಕಲೆಗೆ ಕೇರಳದ ಕಾಸರಗೋಡಿನಲ್ಲಿ ಉಸಿರಿತ್ತು ಪೋಷಿಸುತ್ತಿದ್ದಾರೆ ‘ಕೀರ್ತನ ಕುಟೀರ’ ದ ಸಾರಥಿಯರಾದ ಕಲಾವಿದ ಶಂ. ನಾಡಿಗ
ಮತ್ತು ಪತ್ನಿ ವಿಜಯಲಕ್ಷ್ಮೀ, ಹಾಗೂ ಮಕ್ಕಳು…
ಗತಿಸಿ ಹೋಗಬಹುದಾಗಿದ್ದ ಭಕ್ತಿಪಂಥದ ಕೀರ್ತನ ಕಲೆಯಾದ ಹರಿಕಥೆಯನ್ನು ಎಳೆ ಪೀಳಿಗೆಗೆ ರುಚಿಸಿ.ಕಲಿಸಿ, ರೂಪಿಸುವ ಮೂಲಕ ಹರಿಕಥಾ ಪರಂಪರೆ ಕಾಪಾಡುವ ಹರಿದಾಸ ಶಂ. ನಾ. ಅಡಿಗ ಕುಂಬಳೆ ಅವರ “ಕೀರ್ತನ ಕುಟೀರ” ದ ಹರಿಕೀರ್ತನ ಮಹೋತ್ಸವ 15ನೇ ವರ್ಷಕ್ಕೆ ಕಾಲೂರಿದೆ.
ವರ್ಷಂಪ್ರತಿ ಹರಿಕಥಾ ಸಪ್ತಾಹ ನಡೆಸಿ ಶಿಷ್ಯ ಬಳಗಕ್ಕೆ ವರ್ಷಕ್ಕೊಮ್ಮೆ ಅವಕಾಶದ ವಿಶೇಷ ಉತ್ತೇಜನ ನೀಡುವ
ಕೀರ್ತನ ಕುಟೀರಕ್ಕಿದು 15ನೇ ವರ್ಷದ ಕೀರ್ತನ ಕಥಾ ಮಾಲಿಕೆಯ ಸಂಭ್ರಮ..
ಕಾರ್ಯಕ್ರಮ ವಿವರ ಈ ಕೆಳಗಿನ ಜಾಹೀರಾತಿ ನಲ್ಲಿಗೆ. ಗಮನಿಸಿ..

ಹರಿಕಥೆ ವೈಷ್ಣವ ಪಂಥದ
ಪ್ರಚಾರ ಮತ್ತು ಪ್ರಚೋದನೆ ಗೀತಕಥಾ ಮಾಲಿಕೆ. ಆದರೆ ಬದಲಾದ ಕಾಲಕ್ಕೆ ಹರಿಕಥೆಗಳೂ ಬದಲಾಗಿದೆ.
ಇದು ಪ್ರತಿಯೊಂದು ಕಲೆಯ ಸವಾಲೂ ಹೌದು. ಇಡೀ ಕನ್ನಡ ನಾಡಲ್ಲೇ ಹರಿಕಥೆ ಕೊನೆಯುಸಿರೆಳೆಯುತ್ತದೆ ಎನ್ನುವ ಕಾಲಕ್ಕೆ ಗಡಿನಾಡು ಕಾಸರಗೋಡಿನ ಕೇರಳದ ನೆಲದಲ್ಲಿ ಹರಿಕಥೆಗೆ ಪುನರುತ್ತೇಜನದ ಹೊಸ ಶಿಷ್ಯ ಪರಂಪರೆಯ ಪೀಳಿಗೆ ರೂಪಿಸಿದವರು ಹರಿದಾಸ ಶಂ. ನಾ. ಎಂಬ ಕುಂಬಳೆಯ ಶಂಕರ ನಾರಾಯಣ ಅಡಿಗ. ತಾನೊಬ್ಬ
ಹರಿದಾಸನಾಗಿ ತನ್ನೂರಲ್ಲಿ ಹರಿಕಥಾ ಪರಂಪರೆ ಬೆಳೆಸದಿದ್ದರೆ ಹೇಗೆ?
ಎಂದಾಲೋಚಿಸಿ ಅನಂತಪುರ ದೇವಸ್ಥಾನ ರಸ್ತೆಯ ಮನೆಯನ್ನೇ ಧಾರ್ಮಿಕ ಕಥಾ ಪರಂಪರೆಯ ಗುರುಕುಲವನ್ನಾಗಿಸಿದರು. ಪ್ರತಿ ಭಾನುವಾರಗಳನ್ನೂ ಕಲಿಕೆಗೆ ಮುಡಿಪಿಟ್ಟರು. ಹೀಗೆ ನೂರಾರು ಕೀರ್ತನಕಲಾ ಶಿಷ್ಯರು ಉದಿಸಿದರು
ಹರಿಕಥೆಯಲ್ಲಿ ಹೀಗೊಂದು ಚರಿತೆ ಇನ್ನೊಂದೂರಲ್ಲಿ ಇಲ್ಲ ಎನ್ನೂವುದೇ ವೈಶಿಷ್ಟ್ಯ..
ಈ ಬಾರಿಯ ಸಪ್ತಾಹ ಆಗೋಸ್ಟ್ 18ರಂದು
ಕಣಿಪುರ ಗೋಪಾಲಕೃಷ್ಣದೇವಾಲಯದಲ್ಲಿ ಆರಂಭ. ವೇದಿಕೆಗೆ ಪುರಂದರ ನಾಮಕರಣ. ಆ. 18ರಿಂದ 24ರ ತನಕ ನಡೆಯುವ ಸಪ್ತಾಹಕ್ಕೆ
18ರಂದು ಸಂಜೆ ಅರ್ಚಕ ಕೇಶವ ಅಡಿಗ ದೀಪೋಜ್ವಲನ ಗೈದು ಚಲನೆ ನೀಡುವರು.
ಬಳಿಕ ದೈನಂದಿನ ಸಂಜೆ ಭಜನೆ ಸಹಿತ ಹಿರಿ-ಕಿರಿಯ ಹರಿಕೀರ್ತನ ಕಲಾವಿದರ ಪ್ರಸ್ತುತಿ ಅನಾವರಣವಾಗಿದೆ. ಆ. 24ರಂದು ಸಂಜೆ 4.30ರಿಂದ ಸಮಾರೋಪ ಸಭಾ ಕಾರ್ಯಕ್ರಮ ಜರಗಲಿದ್ದು, ಹರಿಕಥಾ ಪರಿಷತ್ ಮಂಗಳೂರು ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸುವರು ಕಾಸರಗೋಡೂ ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ, ಲೇಖಕ ಪಿ. ಎನ್. ಮೂಡಿತ್ತಾಯ ಮತ್ತು ವಕೀಲ ರಾಂಪ್ರಸಾದ ಮಂಗಳೂರು
ಅತಿಥಿಗಳಾಗಿ ಪಾಲ್ಗೊಳ್ಳುವವರು.








