ಅಗಲಿದ ಅಧ್ಯಾಪಕ ಪ್ರಶಾಂತ ರೈ ಸಂಸ್ಮರಣೆಯೊಂದಿಗೆ ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ವತಿಯಿಂದ ಅಧ್ಯಾಪಕರ ಕ್ರಿಕೆಟ್ ಪಂದ್ಯಾಟ

ಜೈ ಹೋ ಮಾಸ್ಟರ್ಸ್ ಕುಂಬಳೆ ಪ್ರಥಮ, ರಂಗಸಂಗಮ ಕುಂಬಳೆ ದ್ವಿತೀಯ

by Narayan Chambaltimar
  • ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಕಾಸರಗೋಡು ನೇತೃತ್ವದಲ್ಲಿ ಪ್ರಶಾಂತ ರೈ ಸ್ಮರಣಾರ್ಥ ಆಧ್ಯಾಪಕರ ಕ್ರಿಕೆಟ್ ಪಂದ್ಯಾಟ

ಮಿಯಪದವು: ಇಲ್ಲಿನ ಶಾಲಾ ಮೈದಾನದಲ್ಲಿ ದಿವಂಗತ ಅಧ್ಯಾಪಕ ಪ್ರಶಾಂತ ರೈ ಅವರ ಸ್ಮರಣಾರ್ಥ ಅಧ್ಯಾಪಕರಿಗಾಗಿ ಒಂದು ದಿನದ ಕ್ರಿಕೆಟ್ ಪಂದ್ಯಾಟ ಜರಗಿತು. ಪಂದ್ಯಾಟವನ್ನು ಮೀಯಪದವು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉದ್ಘಾಟಿಸಿ “ಕ್ರೀಡೆಯು ಮನೋಲ್ಲಾಸದೊಂದಿಗೆ ಶಾರೀರಿಕ ದೃಢತೆಯನ್ನು ನೀಡುತ್ತದೆ. ಆಧುನಿಕ ಕಾಲದಲ್ಲಿ ಕ್ರೀಡೆಯು ಉತ್ತಮ ಹವ್ಯಾಸ.ಕ್ರೀಡೆಯೊಂದಿಗೆ ಆರೋಗ್ಯವಂತರಾಗಿರೋಣ” ಎಂದರು.

ಸಭೆಯ ಅಧ್ಯಕ್ಷತೆಯನ್ನು ಟಿಎಸ್ಸಿ ಅಧ್ಯಕ್ಷ ಸಂಜೀವ ಸಿ ಎಚ್ ವಹಿಸಿದ್ದರು. ಗೌರವಾಧ್ಯಕ್ಷ ಸದಾಶಿವ ಪೊಯ್ಯೆ ಇವರು ಪ್ರಶಾಂತ ರೈ ಅವರ ಬಗ್ಗೆ ಸಂಸ್ಮರಣೆ ಮಾಡಿದರು. ಸಭೆಯಲ್ಲಿ ಕಾರ್ಯದರ್ಶಿ ಪ್ರಶಾಂತ ಕುಮಾರ್ ಬಿ,ಜೊತೆ ಕಾರ್ಯದರ್ಶಿಗಳಾದ ರಘುವೀರ್ ಹಾಗೂ ಉಪಾಧ್ಯಕ್ಷರಾದ ಉದಯ ಸಾರಂಗ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ವಸಂತ ಎ ಸ್ವಾಗತಿಸಿ, ಅಧ್ಯಾಪಕ ಸುನಿಲ್ ಕುಮಾರ್ ಎಂ ವಂದಿಸಿದರು. ಪಂದ್ಯಾಟದಲ್ಲಿ ಚಾಂಪಿಯನ್ಸ್ ಆದ ಜೈ ಹೋ ಮಾಸ್ಟರ್ಸ್ ಕುಂಬಳೆ ಹಾಗೂ ದ್ವಿತೀಯ ಸ್ಥಾನ ಗಳಿಸಿದ ರಂಗಸಂಗಮ ಕುಂಬಳೆ ತಂಡಕ್ಕೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00