ಸುವರ್ಣ ಮಹೋತ್ಸವ ಅಭಿಯಾನ : ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ನಿಂದ ಆಹ್ವಾನಿತ 18 ತಂಡಗಳ ತಾಳಮದ್ದಳೆ ಸರಣಿ

by Narayan Chambaltimar

ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ (ರಿ) ಉಪ್ಪಿನಂಗಡಿ, ಪುತ್ತೂರು ಇದರ ಟ್ರಸ್ಟಿಗಳ ಮತ್ತು ಸದಸ್ಯರ ಪ್ರಥಮ ಸಭೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.

ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲು ಉದ್ದೇಶಿಸಿರುವ ನೂರು ತಾಳಮದ್ದಳೆಗಳ ಶ್ರೀ ಮಹಾಭಾರತ ಸರಣಿಯಲ್ಲಿ ಆಗಸ್ಟ್ 23 ರಿಂದ ಸೆಪ್ಟೆಂಬರ್ 7ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ದ.ಕ ಜಿಲ್ಲೆಯ ಆಹ್ವಾನಿತ 18 ಯಕ್ಷಗಾನ ತಂಡಗಳ ತಾಳಮದ್ದಳೆ ಪ್ರದರ್ಶನದ ವ್ಯವಸ್ಥೆ ಮತ್ತು ಸ್ವರ್ಣ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು.

ಟ್ರಸ್ಟ್ ಪದಾಧಿಕಾರಿಗಳಾದ ಬಿ. ಸುಬ್ರಹ್ಮಣ್ಯ ರಾವ್, ಮಹಾಲಿಂಗೇಶ್ವರ ಭಟ್ ಕೆ, ಅಂಬಾ ಪ್ರಸಾದ್ ಪಾತಾಳ, ಕೆ.ಬಿ ಶ್ರೀಪತಿ ಭಟ್, ಪದ್ಮನಾಭ ಕುಲಾಲ್ ಇಳಂತಿಲ, ಶ್ರುತಿ ವಿಸ್ಮಿತ್, ಬಿ. ಸುರೇಶ್ ರಾವ್, ಗೀತಾ ಕುದ್ದಣ್ಣಾಯ ಹಾಗೂ ಕೈಲಾರ್ ರಾಜಗೋಪಾಲ ಭಟ್,ಕಿಶೋರ್ ಜೋಗಿ, ಜಯರಾಮ ಶೆಟ್ಟಿ, ಲೋಕೇಶ್ ಬೆತ್ತೋಡಿ ಉಪಸ್ಥಿತರಿದ್ದರು.

ಪುತ್ತೂರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಮಾತನಾಡಿ ಪುತ್ತೂರು,ಉಪ್ಪಿನಂಗಡಿ ಮತ್ತು ಬಾರ್ಯ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಟ್ರಸ್ಟ್ ಇದರ ಯೋಜಿತ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕಾರಿಸುವುದಾಗಿ ತಿಳಿಸಿದರು.

ಆಹ್ವಾನಿತ ತಂಡಗಳ ತಾಳಮದ್ದಳೆಯ ಜವಾಬ್ದಾರಿ ವಹಿಸಿಕೊಂಡಿರುವ ಉಮೇಶ ಶೆಣೈ ರಾಮನಗರ, ಸುರೇಶ ಪುತ್ತೂರಾಯ, ಕೆ.ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಮತ್ತು ಯಕ್ಷ ಭಾರತಿ ಕನ್ಯಾಡಿ ಪ್ರತಿನಿಧಿ ಮಾಹಿತಿಯನ್ನು ಪಡೆದುಕೊಂಡರು.
ರಾಮನಗರದ ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ಕಲಾವಿದ ಪಾತಾಳ ವೆಂಕಟರಮಣ ಭಟ್ ಮತ್ತು ಶ್ರೀ ಕಾಳಿಕಾಂಬಾ ಸಂಸ್ಥೆಯ ಸ್ಥಾಪಕ ಪ್ರಮುಖರಾದ ವೈದ್ಯಕೆ. ಶ್ರೀನಿವಾಸ ಶೆಟ್ಟಿ ಇವರಿಗೆ ನುಡಿನಮನ, ವಿವೃತ ಶಿಕ್ಷಕ ಕಲಾವಿದ ಗೋಪಾಲ ಶೆಟ್ಟಿ ಕಣಜ ಇವರಿಗೆ ನೀಲಮಣಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನಡೆಸಲಾಗುವುದೆಂದು ಅಧ್ಯಕ್ಷರು ತಿಳಿಸಿದರು.

ಉಪಸ್ಥಿತರಿದ್ದ ಬಿ.ಸುಬ್ರಮಣ್ಯ ರಾವ್,ಮಹಾಲಿಂಗೇಶ್ವರ ಭಟ್, ಪಾತಾಳ ಅಂಬಾ ಪ್ರಸಾದ್,ಗೀತಾ ಕುದ್ದಣ್ಣಾಯ ಕಾರ್ಯಕ್ರಮದ ಸಹ ಪ್ರಾಯೋಜಕರಾಗಿ ಸಹಕರಿಸುವುದಾಗಿ ತಿಳಿಸಿದರು.ಮುಂದಿನ ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು, ದಾನಿಗಳನ್ನು ಗುರುತಿಸಲು ಟ್ರಸ್ಟ್ ಪದಾಧಿಕಾರಿಗಳು,ಸದಸ್ಯರನ್ನು ವಿನಂತಿಸಲಾಯಿತು.

ಕನ್ಯಾಡಿ, ಇಚ್ಚುರೂ, ಪೆರಿಯಡ್ಕ ಮತ್ತು ರಾಮನಗರ ಇಲ್ಲಿ ನಡೆಯಲಿರುವ ತಾಳಮದ್ದಳೆಯ ನಿರ್ವಹಣೆಗಾಗಿ ಟ್ರಸ್ಟಿನ ಸದಸ್ಯರನ್ನು ಮತ್ತು ಸ್ಥಳೀಯರನ್ನು ನಿರ್ವಾಹಕರಾಗಿ ನಿಯೋಜಿಸುವ ಬಗ್ಗೆ ತೀರ್ಮಾನಿಸಲಾಯಿತು.

ಸುವರ್ಣ ಮಹೋತ್ಸವದ ವಿವಿಧ ಸಮಿತಿಗಳ ರಚನೆ,ಸ್ಮರಣ ಸಂಚಿಕೆ, ಕಲಾವಿದರ ಸನ್ಮಾನದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡಿ 2025ರ ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಸುವರ್ಣ ವರ್ಷ ಕಾರ್ಯಕ್ರಮವನ್ನು ನಡೆಸುವುದೆಂದು ಕಾರ್ಯದರ್ಶಿ ಶ್ರೀಪತಿ ಭಟ್ ತಿಳಿಸಿದರು.

ವಿಸ್ತೃತವಾದ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಿ ಯಶಸ್ವಿಗೊಳಿಸಲು ಸಹಕಾರ ನೀಡುವುದಾಗಿ ಪದಾಧಿಕಾರಿಗಳುಮತ್ತು ಸದಸ್ಯರು ತಿಳಿಸಿದರು.ಟ್ರಸ್ಟಿನ ಕೋಶಾಧಿಕಾರಿ ಶ್ರೀಮತಿ ಶ್ರುತಿ ವಿಸ್ಮಿತ್ ಸ್ವಾಗತಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ. ಸುಬ್ರಮಣ್ಯ ರಾವ್ ವಂದಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00