496
ಕುಂಬಳೆ – ಬದಿಯಡ್ಕ ರಸ್ತೆಯ ಕನ್ಯಪ್ಪಾಡಿಯ ತಿರುವಿನಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಮೊಟ್ಟೆ ಹೇರಿಕೊಂಡು ಬದಿಯಡ್ಕ ಕಡೆಗೆ ಸಾಗುತ್ತಿದ್ದ ಲಾರಿ ಇದಾಗಿತ್ತು.
ಕನ್ಯಪಾಡಿಯ ತಿರುವಿನಲ್ಲಿ ನಿಯಂತ್ರಣಾತೀತವಾಗಿ ಲಾರಿ ಮಗುಚಿದಾಗ ಅದರಲ್ಲಿದ್ದ ಚಾಲಕ ಮತ್ತು ಸಹಾಯಕರಾದ ಮತ್ತೊಬ್ಬರು ಸಣ್ಣಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ಸೋಮವಾರ ಅಪರಾಹ್ನ ಘಟನೆ ನಡೆಯಿತು.








