ಕೊಚ್ಚಿ: ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ನಿಂದ್ಯ ಮತ್ತು ಆಕ್ಷೇಪಕಾರಿಯಾದ ಉದ್ವಿಗ್ನತೆಯ ಬರಹಗಳನ್ನು ಪ್ರಕಟಿಸುವ ಚಿತ್ರ ನಟ ವಿನಾಯಕನ್ ನನ್ನು ಸೈಬರ್ ಪೋಲೀಸರು ಠಾಣೆಗೆ ಕರೆಸಿ ವಿಚಚಾರಣೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ನಿಧನರಾದ ಸಂದರ್ಭದಲ್ಲಿ ನಟ ವಿನಾಯಕನ್ ಆಕ್ಷೇಪಾರ್ಹ ಬರಹಗಳನ್ನು ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಈ ಸಂಬಂಧ ಪೋಲೀಸರಿಗೆ ದೂರು ಸಲ್ಲಿಸಲಾಗಿತ್ತು.
ಇದೇ ರೀತಿಯ ಹಲವು ಬರಹಗಳ ಕುರಿತಾದ ದೂರುಗಳಿದ್ದುವು. ಪದೇ ಪದೇ ಜಾಲತಾಣದಲ್ಲಿ ಈರೀತಿಯ ಉದ್ವಿಗ್ನತೆಯ ಬರಹ ಹಂಚುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11ಗಂಟೆಗೆ ಕೊಚ್ಚಿ ಸೈಬರ್ ಠಾಣೆಯಲ್ಲಿ ನಟನನ್ನು ವಿಚಾರಣೆಗೆ ಒಳಪಡಿಸಲಾಯಿತು.
ಗಾಯಕ ಕೆ. ಜೆ. ಯೇಸುದಾಸ್, ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಸಹಿತ ಸಮಾಜದಲ್ಲಿ ಏನೇ ಘಟಿಸಿದರೂ ಅದರ ವಿರುದ್ಧ ಅಮಾನವೀಯ ರೀತಿಯ ಬರಹಗಳ ವಿಮರ್ಶೆ, ಟೀಕೆ ಟಿಪ್ಪಣಿ ಮೂಲಕ ನಟ ವಿನಾಯಕನ್
ಕಾಣಿಸಿ ವಿವಾದ ಎಬ್ಬಿಸುತ್ತಿದ್ದರು.
ಆದರೆ ತನ್ನದ್ದು ಆಧುನಿಕ ಕಾಲಘಟ್ಟದ ಕವಿತೆಗಳೆಂದೂ, ಅದು ಆ ಕ್ಷಣದ ಪ್ರತಿಕ್ರಿಯೆಗಳೆಂದೂ ನಟ ವಿನಾಯಕನ್ ಹೇಳಿದ್ದಾನೆ. ನಟನ ವರ್ತನೆ, ಹೇಳಿಕೆಗಳ ವಿರುದ್ಧ ವ್ಯಾಪಕ ಪ್ರತಿಭಟನೆ ಮೊಳಗಿದೆ.









