ಪೈವಳಿಕೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಅಪ್ಪಟ ತುಳು ಸಂಸ್ಕೃತಿ ಉಳಿದಿರುವ ಕೇರಳದ ನೆಲವಾಗಿದೆ. ಇಲ್ಲಿನ ಭಾಷಾ ಸಂಸ್ಕೃತಿಗೆ ಪೋಷಣೆ ನೀಡಿ ನೆಲಮೂಲದ ಸಂಸ್ಕೃತಿ ಕಾಪಾಡಲು ಯುವ ಪೀಳಿಗಿಗೆ ಉತ್ತೇಜನ ಬೇಕು. ಈ ದೃಷ್ಟಿಯಲ್ಲಿ ಕೇರಳ ತುಳು ಅಕಾಡೆಮಿ ಮುಂದಾಳುತ್ವದಲ್ಲಿ ಕೇರಳ ಸರಕಾರದ ಸಹಯೋಗದೊಂದಿಗೆ ಬೃಹತ್ ತುಳು ಉತ್ಸವ ನಡೆಸುವ ಅನಿವಾರ್ಯತೆ ಇದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ನುಡಿದರು.
ಪೈವಳಿಕೆ ಲಾಲ್ ಭಾಗ್ನ ಕುಲಾಲ ಸಭಾ ಭವನದಲ್ಲಿ ಕೇರಳ ತುಳು ಅಕಾಡೆಮಿ ಆಯೋಜಿಸಿದ “.ಆಟಿಡೊಂಜಿ ದಿನೊ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾಷೆ ಮತ್ತು ಸಂಸ್ಕೃತಿಗಳ ಸ್ಥಿತ್ಯಂತರದ ಕಾಲದಲ್ಲಿ ಹೊಸ ಪೀಳಿಗೆಯನ್ನು ಸಂಸ್ಕೃತಿಯ ಮೂಲಕ ಜೋಡಿಸಬೇಕು. ತುಳು ಭಾಷೆಯನ್ನು ಕೆಲವು ಸೀಮಿತ ಜನಾಂಗದವರು ಆಡುಭಾಷೆಯಾಗಿ ಬಳಸುತ್ತಿದ್ದರು ಕೇರಳದ ಗಡಿನಾಡಿನಲ್ಲಿ ತುಳು ಎಲ್ಲ ಭಾಷಿಗರ ಆಚಾರ ಸಂಸ್ಕೃತಿಯಾಗಿದೆ. ಈ ವೈಶಿಷ್ಟ್ಯ ಮತ್ತೆಲ್ಲೂ ಇಲ್ಲ. ಆದ್ದರಿಂದ ತುಳು ಅಕಾಡೆಮಿ ಉತ್ಸವ ಆಯೋಜನೆ ಮಾಡುವುದಾದಲ್ಲಿ ಶಾಸಕನೆಂಬ ನೆಲೆಯಲ್ಲಿ ಪೂರ್ಣ ಬೆಂಬಲದ ಸಹಕಾರ ನೀಡುವುದೆಂದು ಘೋಷಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ ಆರ್. ಜಯಾನಂದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ನಿಯಂತ್ರಿಸಿದರು.
ಗಡಿನಾಡಿನ ತುಳು ಜನಪದ ಬದುಕನ್ನು ಸ್ಮರಿಸಿದಸಮಾರರಂಭದಲ್ಲಿ ತೌಳವರ ಊಟೋಪಚಾರ, ಜನಪದ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ವಿಶೇಷ ಗಮನ ಸೆಳೆಯಿತು.
ಕೇರಳ ತುಳು ಅಕಾಡೆಮಿಯ ಆಟಿಡೊಂಜಿ ದಿನ ಸಮಾರಂಭದಲ್ಲಿ ತುಳುನಾಡಿನ ಬಹುಬಗೆಯ
ಸಾಮಾಜಿಕ ಬದುಕಿಗೆ ಕೊಡುಗೆ ಇತ್ತ ಸಾಧಕರನ್ನು ಗೌರವಿಸಲಾಯಿತು. ತುಳುನಾಡಿನ ಹೆಸರಾಂತ ಮುಳುಗು ತಜ್ಞ ಈಶ್ವರ ಮಲ್ಪೆ, ಕಂಬಳ ಪೋಷಕ , ಕಂಬಳ ತಜ್ಞ ಪಿ. ಆರ್. ಶೆಟ್ಟಿ ಪೊಯ್ಯಲು, ಕಂಬಳ ಪೋಷಕ ಕಡೂರು ಮಾರಪ್ಪ ಭಂಡಾರಿ,
ಕೇರಳ -ಕರ್ನಾಟಕ ರಾಜ್ಯ
ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ, ಕಲಾಗುರು ರಮೇಶ ಶೆಟ್ಟಿ ಬಾಯಾರು, ಅಪರೂಪದ ಪುಸ್ತಕ ಸಂಗ್ರಾಹಕ, ಗ್ರಂಥಾಲಯ ರೂಪಕ ಸುರೇಂದ್ರ ಕೋಟ್ಯಾನ್ ಮಾಡ, ಕಂಬಳ ಓಟಗಾರ ವಂದಿತ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಯೋಗ ಪಟು ಕಾವ್ಯಶ್ರೀ ಪೂಜಾರಿ ಇವರನ್ನು
ಅಕಾಡೆಮಿ ವತಿಯಿಂದ ಗೌರವಿಸಲಾಯಿತು.
ಪೈವಳಿಕೆ ಗ್ರಾ. ಪಂ. ಅಧ್ಯಕ್ಷೆ ಜಯಂತಿ .ಕೆ, ಪೈವಳಿಕೆ ಗ್ರಾ. ಪಂ.. ಜನಪ್ರತಿನಿಧಿ, ಮುಂದಾಳು ಅಬ್ದುಲ್ ರಜಾಕ್ ಚಿಪ್ಪಾರ್, ಮಾಜಿ ಬ್ಲಾಕ್ ಪಂ. ಸದಸ್ಯ ಹರೀಶ್ ಬೊಟ್ಟಾರಿ,
ಗೋ. ಪೈ. ಸ್ಮಾರಕ ಸಂಸ್ಥೆ ಕಾರ್ಯದರ್ಶಿ ಉಮೇಶ ಸಾಲಿಯಾನ್, ರಂಗಕಲಾವಿದ, ಸಿಪಿಐ ನಾಯಕ ರಾಮಕೃಷ್ಣ ಕಡಂಬಾರ್, ಸಾಮಾಜಿಕ ಕಾರ್ಯಕರ್ತ ಮೋನಪ್ಪ ಶೆಟ್ಟಿ ಬಾಯಾರ್, ಅಶೋಕ ಎಂ. ಸಿ ಲಾಲ್ಬಾಗ್. ಮೀನಾಕ್ಷಿ ಬೊಡ್ಡೋಡಿ ಮತ್ತು ಅಕಾಡೆಮಿ ಸದಸ್ಯರು ಮತ್ತು ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು.








