- ಭಾರತದ ಆಮದಿಗೆ 25ಶೇ.ಸುಂಕ ವಿಧಿಸಿದ ಅಮೇರಿಕಾ
- ತೆರಿಗೆ ಹೇರಿಕೆ ಬೆನ್ನಲ್ಲೇ ಪಾಕಿಸ್ತಾನ ಕ್ಕೆ ಸಹಾಯ : ಪಾಕ್ ತೈಲಾಭಿವೃದ್ಧಿಗೆ ಟ್ರಂಪ್ ಒಪ್ಪಂದ
ದೆಹಲಿ : ಭಾರತ ತನ್ನ ಮಿತ್ರ ದೇಶ ಎನ್ನುತ್ತಾ, ಪ್ರಧಾನಿ ಮೋದಿ ಜತೆ ಹಸ್ತ ಲಾಘವ ಮಾಡಿ ಆಲಿಂಗಿಸುತ್ತಲೇ ಇದ್ದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸಯಕುಗಳ ಆಮದಿಗೆ ಶೇ. 25ರಷ್ಟು ಸುಂಕ ಹೇಳಿದ್ದಾರೆ.
ರಷ್ಯಾ ದಿಂದ ಭಾರತ ನಿರಂತರ ತೈಲ ಆಮದು ಮತ್ತು ದೀರ್ಘಕಾಲೀನ ವ್ಯಾಪಾರ ವಹಿವಾಟು ನಡೆಸುವುದನ್ನು ವಿರೋಧಿಸಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.
ಆ. 1ರಿಂದಲೇ ಜ್ಯಾರಿಗೆ ಬರುವಂತೆ ಘೋಷಿಸಿದ 25ಶೇ.ತೆರಿಗೆ ವಾಣಿಜ್ಯ -ವ್ಯವಹಾರಗಳ ಮೇಲೆ ಮತ್ತು ಭಾರತದ ಜಿಡಿಪಿ ಯ ಮೇಲೆ ಪರಿಣಾಮ ಬೀರಲಿದೆ.
ಭಾರತದ ಜತೆ ವಾಣಿಜ್ಯ ಸುಂಕ ಹೇರಿಕೆ ಬೆನ್ನಲ್ಲೇ ಪಾಕಿಸ್ತಾನದ ಬಳಿ ಇರುವ ತೈಲ ಸಂಗ್ರಹಾಗಾರ ಅಭಿವೃದ್ದಿ ಗೆ ಅಮೇರಿಕ ನೆರವಾಗುವುದಾಗಿ ಘೋಷಿಸಿದೆ. ಈ ಸಂಬಂಧ ಪಾಕ್ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ. ಅಮೇರಿಕ ಬೆಂಬಲಿಸಿದರೆ ಒಂದಲ್ಲೊಂದು ದಿನ ಪಾಕಿಸ್ತಾನ ಭಾರತಕ್ಕೆ ತೈಲ ಮಾರಾಟ ಮಾಡಲಿರುವುದಾಗಿ ಟ್ರಂಪ್ ಸೂಚಿಸಿದ್ದಾರೆ. ಭಾರತಕ್ಕೆ ತೆರಿಗೆ ಹೇರಿ ಪಾಕಿಸ್ತಾನ ದ ಒಪ್ಪಂದ ಮಾಡಿದ ಟ್ರಂಪ್ ನಡೆ ಭಾರತಕ್ಕೆ ತಿರುಗೇಟಾಗಲಿದೆ ಎನ್ನಲಾಗುತ್ತಿದೆ.

ಅಮೇರಿಕ ಘೋಷಿಸಿದ ತೆರಿಗೆ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯಿಸಿದ್ದು, ದೇಶದ ರೈತರ, ವ್ಯಾಪಾರಿಗಳ, ಉದ್ಯಮಿಗಳ ಹಿತರಕ್ಷಣಾ ದೃಟಿಯಿಂದ ಈ ಕುರಿತು ಅಮೇರಿಕ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದೆ. ಕೆಲವು ತಿಂಗಳಿಂದ ಭಾರತ – ಅಮೇರಿಕ ನಡುವೆ ದ್ವಿಪಕ್ಷೀಯ ಒಪ್ಪಂದ ಏರ್ಪಡುವ ರಾಷ್ಟ್ರೀಯ ಹಿತಾಸಕ್ತಿ ಆಧಾರದ ಮೇಲೆ ಅಧ್ಯಯನ /ಮಾತುಕತೆ ನಡೆಯುತ್ತಿದೆ. ಅಮೇರಿಕ ಹೊಸತಾಗಿ ಘೋಷಿಸಿದ ತೆರಿಗೆ ಭಾರತದ ಹಲವು ಉನ್ನತ ಕಾರ್ಯನಿರ್ವಹಣೆ ಯ ರಫ್ತು ವಲಯವನ್ನು ಗುರಿಯಾಗಿರಿಸಿದೆ. ಅಟೋ ಮೊಬೈಲ್, ಆಟೋ ಘಟಕಗಳು, ಉಕ್ಕು, ಅಲ್ಯೂಮಿನಿಯಂ, ಸ್ಮಾರ್ಟ್ಶಪ ಫೋನ್, ಸೌರ ಮಾಡ್ಯೂಲ್ ಗಳು, ಸಮುದ್ರೋತ್ಪನ್ನಗಳು, ಮುತ್ತು -ರತ್ನ, ಆಭರಣ ಮತ್ತು ಆಯ್ದ ಸಂಸ್ಕರಿಸಿದ ಕೃಷಿ ವಸ್ತುಗಳಿಗೆ 25ಶೇ. ತೆರಿಗೆ ವಿಧಿಸಿದೆ. ಆದರೆ ಕೆಲ ಔಷಧಿ, ಸೆಮಿ ಕಂಡಕ್ಟರಿಂಗ್ ಸಹಿತ ಖನಿಜ ಗಳನ್ನು ಹೊರಗಿಡಲಾಗಿದೆ.
ತನ್ನ ಸಾಮಾಜಿಕ ಜಾಲತಾಣ ವೇದಿಕೆಯಾದ ‘ಟ್ರುತ್ ‘ ನಲ್ಲಿ ಈ ವಿಚಾರ ಹಂಚಿಕೊಂಡ ಟ್ರಂಪ್ “ಇದು ಭಾರತ ಜತೆಗಿನ ವಾಣಿಜ್ಯ ಒಪ್ಪಂದಕ್ಕೆ ಅಮೇರಿಕ ವಿಧಿಸುವ ಗಡುವು” ಎಂದಿದ್ದಾರೆ. ಅಮೇರಿಕದ ಈ ನಿರ್ದಾಕ್ಷಿಣ್ಯ ಕ್ರಮವನ್ನು ಭಾರತೀಯ ಮಾಧ್ಯಮಗಳು ಇದು “ಸುಂಕಾಸ್ತ್ರ”ಮತ್ತು ತೆರಿಗೆ ಯುದ್ಧ ಎಂದು ಬಣ್ಣಿಸಿಕೊಂಡಿವೆ.!








