ಬಂಟ್ವಾಳ ತಿರುಮಲ ವೆಂಕಟರಮಣ ಕ್ಷೇತ್ರದ ಶ್ರಾವಣ ತಾಳಮದ್ದಳೆ : ಉಪ್ಪಿನಂಗಡಿ ಕಾಳಿಕಾಂಬಾ ಸಂಘದಿಂದ ‘ಸಮರ್ಥ ಸಮೀರಜ’ ಪ್ರದರ್ಶನ

by Narayan Chambaltimar

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ನಡೆಯುವ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆಯಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ನಾಗರಪಂಚಮಿಯಂದು ಕವಿ ಗಣೇಶ ಕೊಲಕಾಡಿ ವಿರಚಿತ ಸಮರ್ಥ ಸಮೀರಜ ತಾಳಮದ್ದಳೆಯು ದಿವಾಕರ ಆಚಾರ್ಯ ಗೇರುಕಟ್ಟೆ ಸಂಯೋಜನೆಯಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ನಿತೇಶ್ ಕುಮಾರ್.ವೈ ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ , ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಧರ್ಮರಾಯ, ಆರ್ಯಕ ) ಸುರೇಶ ಶೆಟ್ಟಿ ಪುಂಜಾಲಕಟ್ಟೆ (ಕೌರವ, ತಕ್ಷಕ ) ಹರೀಶ ಆಚಾರ್ಯ ಬಾರ್ಯ (ಭೀಮ )ಶ್ರೀಧರ ಯಸ್. ಪಿ ಸುರತ್ಕಲ್(ದುಶ್ಯಾಸನ, ವಾಸುಕಿ) ಶ್ರುತಿ ವಿಸ್ಮಿತ್ ಬಲ್ನಾಡು(ಐರಾವತ, ನಾಗಚರ)ಭಾಗವಹಿಸಿದ್ದರು.

ದುರ್ಯೋಧನನ ಷಡ್ಯಂತ್ರದಿಂದ ವಿಷ ಉಣಿಸಲ್ಪಟ್ಟು ಪಾತಾಳ ಲೋಕವನ್ನು ಸೇರಿದಂತಹ ಭೀಮಸೇನನಿಗೆ ನಾಗರಾಜ ವಾಸುಕಿ ಮತ್ತು ಆರ್ಯಕರ ಅನುಗ್ರಹದಿಂದ ಸಾವಿರ ಆನೆಯ ಬಲದ ನಾಗಾನುಗ್ರಹವನ್ನು ಪಡೆದು ಬಲ ಭೀಮನೆನಿಸುವ ಈ ಕಥಾನಕವು ಶ್ರೀ ಮಹಾಭಾರತ ಸರಣಿಯ 80ನೇ ಅಪೂರ್ವ ಪ್ರಯೋಗವಾಗಿ
ಪ್ರಸಂಶೆ ಪಡೆಯಿತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00