- ಕುಂಬಳೆ ಪಂ. ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ಬಿಜೆಪಿ ನಿಷ್ಕ್ರಿಯವಲ್ಲ: ಎಲ್ಲರಿಗಿಂತ ಮೊದಲೇ ತನಿಖೆಗೆ ಒತ್ತಾಯಿಸಿ ವಿಜಿಲೆನ್ಸ್ ಗೆ ದೂರು ನೀಡಿದ್ದೇ ಬಿಜೆಪಿ!
ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿನಲ್ಲಿ ಪಂ. ಕಾರ್ಯದರ್ಶಿಯ ಕಚೇರಿಯೊಳಗೆ ಅತಿಕ್ರಮಿಸಿ ಕಾರ್ಯದರ್ಶಿ ಇಲ್ಲದ ವೇಳೆ ಪಂ. ಅಧ್ಯಕ್ಷೆಯ ಪತಿ ಕಡತ ಹುಡುಕಾಡಿ, ದಾಖಲೆ ಲಪಟಾಯಿಸಲೆತ್ನಿಸುವ ವೀಡಿಯೋ ಈಗಿನದ್ದಲ್ಲವೆಂದೂ, ಇದು 5ತಿಂಗಳ ಹಿಂದೆ ಕಳೆದ ಫೆಬ್ರವರಿಯಲ್ಲಿ ನಡೆದ ಘಟನೆ ಯ ವೀಡಿಯೋ ಚಿತ್ರೀಕರಣವೆಂದೂ ಬೆಳಕಿಗೆ ಬಂದಿದೆ.
ಈ ವೀಡಿಯೋ ಐದು ತಿಂಗಳಿಂದ ಸಾರ್ವಜನಿಕರ ಜಾಲತಾಣದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಕಳೆದ ಮಾರ್ಚ್ ತಿಂಗಳಲ್ಲಿ ಬಿಜೆಪಿ ವತಿಯಿಂದ ವಿಜಿಲೆನ್ಸ್ ಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಕುಂಬಳೆ ಮಂಡಲ ಬಿಜೆಪಿ ಕಾರ್ಯದರ್ಶಿ ಎಂ. ಪ್ರದೀಪ್ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಗಲಾಗಿದೆಯಾದರರೂ ವಿಜಿಲೆನ್ಸ್ ತನಿಖಾಧಿಕಾರಿಗಳು ತನಿಖೆ ಊರ್ಜಿತಗೊಳಿಸಿಲ್ಲ. ಪಂಚಾಯತಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ವಿಪಕ್ಷ ಬಿಜೆಪಿ ನಿಷ್ಕ್ರಿಯವಾಗಿಲ್ಲವೆಂದೂ, ಪಂ. ಆಡಳಿತದ ವಿರುದ್ಧ ಪ್ರಪ್ರಥಮ ಸತತ 4ದೂರುಗಳನ್ನು ದಾಖಲಿಸಿ ಹೋರಾಡುತ್ತಿದೆ. ಆದರೆ ವಿಜಿಲೆನ್ಸ್ ತನಿಖಾಧಿಕಾರಿಗಳು
ಆಮೆನಡಿಗೆಯ ತನಿಖೆ ನಡೆಸುತ್ತಿದ್ದಾರೆಂದು ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್ ಆರೋಪಿಸಿದ್ದಾರೆ.

- 2025 ಮಾರ್ಚ್ 3ರಂದು ವಿಜಿಲೆನ್ಸ್ ಗೆ ನೀಡಿದ ದೂರು ಸ್ವೀಕಾರದ ರಶೀದಿ
ಕುಂಬಳೆ ಕಡವಿನ ಹೊಯ್ಗೆ ಎತ್ತುವ ಭ್ರಷ್ಟಾಚಾರ, ಬದಿಯಡ್ಕ ರಸ್ತೆಯ ಟೇಕ್ -ಎ ಬ್ರೇಕ್ ಕಟ್ಟಡ ನಿರ್ಮಾಣ ಮತ್ತು ಬದಿಯಡ್ಕ ರಸ್ತೆಯ ಬಸ್ ಶೆಲ್ಟರ್ ಕಾಮಗಾರಿಗೆ ಸಂಬಂಧಿಸಿ ನಡೆದ ಭ್ರಷ್ಟಾಚಾರ ದ ತನಿಖೆಗೆ ಒತ್ತಾಯಿಸಿ ಬಿಜೆಪಿ ದೂರು ಸಲ್ಲಿಸಿತ್ತು. ಇತರೆಲ್ಲರಿಗಿಂತ ಮೊದಲೇ ಬಿಜೆಪಿ ದೂರು ದಾಖಲಿಸಿದ್ದರೂ ವೇಗದ, ಪಾರದರ್ಶಕ ತನಿಖೆ ನಡೆಯದೇ ಮಂದಗತಿಯಲ್ಲಿರುವುದು ಪ್ರಶ್ನಾರ್ಹವಾಗಿದೆ. ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಯುವುದು ಮನಗಂಡು ಪಂ. ಅಧ್ಯಕ್ಷೆಯ ಪತಿ ಹಾಗೂ ಗುತ್ತಿಗೆದಾರನೋರ್ವ ಗ್ರಾ. ಪಂ. ಕಾರ್ಯದರ್ಶಿಯಿಂದ ಬಸ್ ಶೆಲ್ಟರ್ ನಿರ್ಮಾಣದ ಯೋಜನಾ ಮೊತ್ತ ಮಂಜೂರು ಮಾಡುವಂತೆ ಒತ್ತಾಯಿಸಿ
ಕಾರ್ಯದರ್ಶಿಗೆ ಬೆದರಿಕೆ ಒಡ್ಡಿದ್ದರು. ಇದನ್ನು ಕಾರ್ಯದರ್ಶಿ ಸದಸ್ಯರ ವಾಟ್ಸಪ್ ಗ್ರೂಪಿನಲ್ಲಿ ಹಂಚುವ ಮೂಲಕ ಪ್ರಕರಣ ಹೊಸ ಜೀವ ಪಡೆದು ಸಾರ್ವಜನಿಕ ಪ್ರತಿಭಟನೆ ಆರಂಭಗೊಂಡಿತು.
ಪ್ರಸ್ತುತ ತನಿಖೆ ಊರ್ಜಿತಗೊಳಿಸಿ, ಸತ್ಯಾಸತ್ಯತೆ ಬಯಲಿಗೆ ತಂದು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಬೇಕೆಂದು ಬಿಜೆಪಿ ಮಂಡಲ ಕಾರ್ಯದರ್ಶಿ ಆಗ್ರಹಿಸಿದ್ದಾರೆ.






