ಆ. 9 ನೂಲಹುಣ್ಣಿಮೆ ದಿನ ಕೇರಳದ ಸರಕಾರಿ ಹುದ್ದೆಗೆ ಪಿಎಸ್ ಸಿ ಪರೀಕ್ಷೆ : ಬ್ರಾಹ್ಮಣರನ್ನು ಸರಕಾರಿ ಹುದ್ದೆಯಿಂದ ವಂಚಿತರನ್ನಾಗಿಸುವ ಸಂಚೆಂದು ಆರೋಪ

ಪರೀಕ್ಷಾ ದಿನ ಬದಲಿಸಲು ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಪ್ ಗ್ರೂಪ್ ಎಡ್ಮಿನ್ ಆಗ್ರಹ

by Narayan Chambaltimar

ಕಾಸರಗೋಡು: ಪ್ರಾದೇಶಿಕ ರಜಾ ದಿನವಾದ ನೂಲಹುಣ್ಣಿಮೆಯ ಋಗುಪಾಕರ್ಮದ ದಿನವೇ ಕೇರಳ ಸರಕಾರ ಇರಿಸಿಕೊಂಡ ಲೋಕಸೇವಾ ಆಯೋಗದ ಪಿಎಸ್ ಸಿ ಪರೀಕ್ಷೆಯನ್ನು ರದ್ದು ಪಡಿಸಬೇಕು ಮತ್ತು ಇನ್ನೊಂದು ದಿನಕ್ಕೆ ಬದಲಾಯಿಸಬೇಕೆಂದು ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಪ್ ಗ್ರೂಪ್ ಒತ್ತಾಯಿಸಿದೆ.
ಈ ಸಂಬಂಧ ಗ್ರೂಪಿನ ಎಡ್ಮಿನ್ ಜಯನಾರಾಯಣ ತಾಯನ್ನೂರು ಪಿಎಸ್ ಸಿ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಪರೀಕ್ಷಾ ದಿನಾಂಕ ಬದಲಾಯಿಸಲು ಆಗ್ರಹಿಸಿದ್ದಾರೆ.

ಆಗಸ್ಟ್ 9ರಂದು ಕೇರಳ ರಾಜ್ಯ ಸಿವಿಲ್ ಸಪ್ಲೈಸ್ ಕೋರ್ಪರೇಷನ್ ಲಿ. ಯ ಅಸಿಸ್ಟೆಂಟ್ ಸೇಲ್ಸ್ ಮೆನ್ ಹುದ್ದೆಗೆ ಪಿಎಸ್ ಸಿ ಪರೀಕ್ಷೆ ಇರಿಸಿಕೊಂಡಿದೆ. ಈ ದಿನ ಬ್ರಾಹ್ಮಣರ ಆಚಾರನುಷ್ಠಾನ ವಿಧೇಯ ಋಗುಪಾಕರ್ಮದ ದಿನ. ಅಂದು ಬ್ರಾಹ್ಮಣರಿಗೆ ಜನಿವಾರ ಬದಲಾಯಿಸುವ ಸಾಂಪ್ರದಾಯಿಕ ಆಚಾರ ವಿಧಗಳಿವೆ. ಇದನ್ನರಿತು ಸರಕಾರ ವರ್ಷಂಪ್ರತಿ ಈ ಹಿಂದೆಯೇ ಈ ಬಾಬ್ತು ನಿಯಂತ್ರಿತ ರಜೆ ನೀಡುತ್ತಿದೆ.
ಆದರೆ ಇದೇ ದಿನ ಪರೀಕ್ಷೆ ಇರಿಸಿಕೊಂಡಿರುವುದು ಬ್ರಾಹ್ಮಣರನ್ನು ಪರೀಕ್ಷೆಯಿಂದಲೇ ಹೊರತುಪಡಿಸುವ ಸಂಚಿನಂತೆ ತೋರುತ್ತಿದೆ ಎಂದು ಜಯನಾರಾಯಣ ತಾಯನ್ನೂರು ಲೋಕಸೇವಾ ಆಯೋಗ ಅಧ್ಯಕ್ಷರಾಗಿ ಮಾಡಿದ ವಿನಂತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಪ್ರಸ್ತುತ ದಿನ ಪರೀಕ್ಷೆ ನಡೆದರೆ ಬ್ರಾಹ್ಮಣ ವರ್ಗಕ್ಕೆಲ್ಲಾ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯ. ಈ ಮೂಲಕ ಸರಕಾರಿ ಉದ್ಯೋಗ ಅವಕಾಶದಿಂದ ಬ್ರಾಹ್ಮಣರು ವಂಚಿತರಾಗುತ್ತಾರೆ. ಆದ್ದರಿಂದ ಈ ಹುದ್ದೆಯ ಪರೀಕ್ಷಾ ದಿನವನ್ನು ಮತ್ತೊಂದು ದಿನಕ್ಕೆ ಬದಲಾಯಿಸಬೇಕೆಂದು ಜಯನಾರಾಯಣ ಮನವಿ ಮುಖೇನ ಒತ್ತಾಯಿಸಿದ್ದಾ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00