ಕುಂಬಳೆ :ರಾಷ್ಟ್ರೀಯ ಕೆಲಸ ಸ್ಥಗಿತ ಮುಷ್ಕರದಂಗವಾಗಿ ಸೀತಾಂಗೋಳಿಯಲ್ಲಿ ಇಂದು ಬೆಳಿಗ್ಗೆ ಮುಷ್ಕರ ಬೆಂಬಲಿಗರು ಲಾರಿಯೊಂದರ ಸಂಚಾರ ತಡೆದಾಗ ಘರ್ಷಣೆ ಉಂಟಾಗಿ ಇಬ್ಬರು ಪೋಲೀಸರ ಸಹಿತ ಇಬ್ಬರು ಸಿಪಿಐ ಎಂ ಕಾರ್ಯಕರ್ತರು ಗಾಯಗೊಂಡರು.
ಸೀತಾಂಗೋಳಿ ಜಂಕ್ಷನ್ ನಲ್ಲಿವಾಹನಗಳ ಸಂಚಾರ ತಡೆದು ಮುಷ್ಕರ ನಡೆಸುತ್ತಿದ್ದ
ಸಿಐಟಿಯು, ಸಿಪಿಎಂ ಕಾರ್ಯಕರ್ತರನ್ನು ಚದುರಿಸಲು ಪೋಲೀಸರು ಮುಂದಾದಾಗ ಘರ್ಷಣೆ ನಡೆದಿದ್ದು ಕುಂಬಳೆ ಪೋಲೀಸ್ ಠಾಣೆಯ ಸಿಬಂದಿಗಳಾದ ಬಾಬುರಾಜ್, ಫೆಬಿನ್ ಎಂಬಿವರು ಗಾಯಗೊಂಡು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರು.
ಇದೇ ವೇಳೆ ವಿನಾಕಾರಣ ಮುಷ್ಕರ ನಿರತರ ಮೇಲೆ ಪೋಲೀಸ್ ದೌರ್ಜನ್ಯ ನಡೆಸಿದೆ ಎಂದು ಸಿಪಿಎಂ ಆರೋಪಿಸಿದೆ. ಪೋಲೀಸ್ ಆಕ್ರಮಣದಲ್ಲಿ ಸಿಪಿಎಂ ಪುತ್ತಿಗೆ ಲೋಕಲ್ ಸೆಕ್ರೆಟರಿ ಸಂತೋಷ್, ಸಿಐಟಿಯು ಏರಿಯ ಸೆಕ್ರೆಟರಿ ಬಿನೇಶ್ ಎಂಬಿವರು ತೀವ್ರ ಗಾಯಗೊಂಡಿದ್ದಾರೆ.
ಸಂತೋಷ್ ಅವರ ಕಣ್ಣಿಗೆ ಏಟಾದರೆ ಬಿನೇಶ್ ಅವರ ಕೈ ಮೂಳೆ ಮುರಿದಿದೆ ಎನ್ನಲಾಗಿದೆ. ಇವರಿಬ್ಬರನ್ನೂ ಕುಂಬಳೆ ಪೋಲೀಸರು ಕಸ್ಟಡಿಗೆ ತೆಗೆದಿದ್ದಾರೆ.





