183
ಕುಂಬಳೆ : ಪುತ್ತಿಗೆ ಗ್ರಾ. ಪಂ. ನ ಆರೋಗ್ಯ ಮತ್ತು ಶೈಕ್ಷಣಿಕ ವಲಯದ ಅಭಿವೃದ್ಧಿಗಾಗಿ ಕೆನರಾ ಬೇಃಕಿನ ಸಿ. ಎಸ್. ಆರ್ ಫಂಡ್ ಮೂಲಕ 10ಲಕ್ಷ ರೂ ಮಂಜೂರು ಮಾಡಲಾಯಿತು. ಸೀತಾಂಗೋಳಿಯಲ್ಲಿ ನೂತನವಾಗಿ ಆರಂಭಗೊಂಡ ಬೇಃಕಿನ ಬ್ರಾಂಚಿನ ಸಮಾಜ ಕಲ್ಯಾಣ ಯೋಜನಾ ನಿಧಿಯಿಂದ ಈ ಮೊತ್ತ ಪಂಚಾಯತಿಗೆ ನೀಡಲಾಗಿದೆ.
ಪುತ್ತಿಗೆ ಕುಟುಂಬ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ಪಂ. ವ್ಯಾಪ್ತಿಯ ಶಾಲೆಗಳಿಗೆ ಪೀಠೋಪಕರಣಗಳ ಖರೀದಿಗೆ ಈ ಧನ ಸಹಾಯ ವಿನಿಯೋಗವಾಗಲಿದೆ.
ಅನುದಾನ ನಿಧಿಯನ್ನು ಬೇಂಕ್ ಮೇನೇಜರ್ ಜಯಚಂದ್ರ ಅವರು ಪುತ್ತಿಗೆ ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಆಡಳಿತ ಸದಸ್ಯರು, ಪಂ. ಕಾರ್ಯದರ್ಶಿ, ಹರಿತ ಕರ್ಮಸೇನಾ ಸದಸ್ಯರು, ಉದ್ಯೋಗ ಖಾತರಿ ಸದಸ್ಯರು ಉಪಸ್ಥಿತರಿದ್ದರು.
ಇದು ಪುತ್ತಿಗೆ ಗ್ರಾ. ಪಂ. ಅಪೇಕ್ಷೆ ಮೇರೆಗೆ ಕೆನರಾ ಬೇಂಕಿನ ಸೀತಾಂಗೋಳಿ ಶಾಖೆಯ ಮೇನೇಜರ್ ಅವರ ಮುತುವರ್ಜಿಯಿಂದ ಮಂಜೂರಾದ ನಿಧಿ. ಪುತ್ತಿಗೆ ಗ್ರಾ ಪಂ ವಿಶೇಷ ಆದಾಯ ರಹಿತ ಗ್ರಾಮೀಣ ಪಂಚಾಯತು. ಇಲ್ಲಿ ಸಮಾಜ ಕಲ್ಯಾಣ ಪರಿಕಲ್ಪನೆಯಿಂದ ಗ್ರಾಮಾಭಿವೃದ್ಧಿ ನಡೆಸಬೇಕು. ಅದಕ್ಕೆ ಜನ ಸಹಭಾಗಿತ್ವ ಸಹಕಾರ ಬೇಕು. ಎಲ್ಲರೂ ಸೇರಿದರೆ ಮಾತ್ರ ಊರು..
ಪುತ್ತಿಗೆ ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ





