ನಿಲಂಬೂರು ಉಪಚುನಾವಣೆ ಆರಂಭ : ಕಣದಲ್ಲಿ 10ಮಂದಿ ಅಭ್ಯರ್ಥಿಗಳು

ಮುಖ್ಯಮಂತ್ರಿ ಮತ್ತು ಎಡರಂಗದ ವಿರುದ್ಧ ಬಹಿರಂಗ ಕದನಕ್ಕಿಳಿದ ಪಿ.ವಿ.ಅನ್ವರ್ ಭವಿಷ್ಯ ನಿರ್ಣಯಿಸುವ ಚುನಾವಣೆ

by Narayan Chambaltimar
  • ಕೇರಳದ ರಾಜಕೀಯ ವಲಯದಲ್ಲೇ ಕುತೂಹಲ ಮೂಡಿಸಿದ ನಿಲಂಬೂರ್ ಉಪಚುನಾವಣೆ

  • ಕೇರಳದ ರಾಜಕೀಯ ವಲಯದಲ್ಲೇ ಕುತೂಹಲ ಮೂಡಿಸಿದ ನಿಲಂಬೂರ್ ಉಪಚುನಾವಣೆ

  • ಎಡರಂಗ ಮತ್ತು ಪಿಣರಾಯಿ ವಿರುದ್ಧ ತೊಡೆತಟ್ಟಿ ಸವಾಲೆಸೆದ ಪಿ.ವಿ.ಅನ್ವರ್ ಭವಿಷ್ಯ ನಿರ್ಣಯಿಸುವ ರಾಜಕೀಯ ಕದನ

  • ಕೈ’ ಬಿಟ್ಟು ಹೋದ ನಿಲಂಬೂರು ಯುಡಿಎಫ್ ಪಾಲಿಗೆ ಮತ್ತೆ ‘ಕೈ’ ಹಿಡಿಯುವುದೇ?

ಕೇರಳದಲ್ಲಿ ಉಪ ಚುನಾವಣೆ ನಡೆಯುತ್ತಿರುವ ನಿಲಂಬೂರಿನಲ್ಲಿ ಜಡಿ ಮಳೆಯ ನಡುವೆಯೂ ಮತದಾನ ಆರಂಭಗೊಂಡಿದ್ದು, ಬಿರುಸಿನಿಂದ ವೋಟಿಂಗ್ ನಡೆಯುತ್ತಿದೆ.
ಮುಂಬರುವ ಸ್ಥಳೀಯಾಡಳಿತ, ವಿಧಾನಸಭಾ ಚುನಾವಣಾ ಪೂರ್ವದ ಸೆಮಿ ಫೈನಲ್ ಎಂಬಂತೆ ಉಪಚುನಾವಣೆಯನ್ನು ಬಣ್ಣಿಸಲಾಗಿದೆ. ರಾಜಕೀಯ ಆವೇಶ ಮುಗಿಲುಮುಟ್ಟಿದ, ಪ್ರಚಾರ ಭರಾಟೆಗಳಿಂದ ಸ್ಪೂರ್ತಿಗೊಂಡ ಮತದಾರರು ಮತಗಟ್ಟೆಗಳಲ್ಲಿ ಸರದಿ ಸಾಲು ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ
7ಕ್ಕೆ ಆರಂಭಗೊಂಡ ಮತದಾನ ಸಂಜೆ 6ರ ತನಕ ನಡೆಯಲಿದೆ.

ಕಣದಲ್ಲಿ ಸ್ಪರ್ಧಿಗಳಾಗಿ 10ಮಂದಿ ಅಭ್ಯರ್ಥಿಗಳಿದ್ದಾರೆ. ಎನ್.ಡಿ.ಎಯ ಬಿಜೆಪಿ ಅಭ್ಯರ್ಥಿ ಮೋಹನ್ ರಾಜ್, ಯುಡಿಎಫ್ ನ ಕಾಂಗೈ ಅಭ್ಯರ್ಥಿ ಆರ್ಯಾಡನ್ ಶೌಕತ್, ಎಡರಂಗದ ಸಿಪಿಐಎಂ ಅಭ್ಯರ್ಥಿ ಎಂ.ಸ್ವರಾಜ್, ಎಸ್.ಡಿ.ಪಿ.ಐ ಅಭ್ಯರ್ಥಿ ಅಡ್ವಕೇಟ್ ಸಾದಿಕ್, ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿ ಪಿ.ವಿ.ಅನ್ವರ್, ಹಾಗೂ ಇತರ ನಾಲ್ವರು ಪಕ್ಷೇತರರೂ ಸೇರಿದಂತೆ 10ಮಂದಿ ಅಭ್ಯರ್ಥಿಗಳು ಸೆಣಸಾಡುವ ನಿಲಂಬೂರು ಉಪ ಚುನಾವಣೆ ರಾಜಕೀಯ ಸಂವಾದಗಳಿಂದ ಕೇರಳದಲ್ಲಿ ಗಮನ ಸೆಳೆದಿದೆ.
ಎಡರಂಗದ ಬೆಂಬಲದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೇಲುವು ಪಡೆದು ಎರಡು ಬಾರಿ ಶಾಸಕರಾಗಿದ್ದ ಪಿ.ವಿ. ಅನ್ವರ್ ಎಡರಂಗದ ಜತೆ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬಹಿರಂಗ ಸಮರ ಸಾರಿ, ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ.
ಈ ಹಿಂದೆ ಸತತ ಯುಡಿಎಫ್ ಗೆಲ್ಲುತ್ತಿದ್ದ ಕ್ಷೇತ್ರ ಇದಾಗಿತ್ತು
ಆದರೆ ಕಳೆದೆರಡು ಬಾರಿ ಪಿ.ವಿ.ಅನ್ವರ್ ಮೂಲಕ ಎಡರಂಗ ಈ ಕ್ಷೇತ್ರವನ್ನು ಕಸಿದುಕೊಂಡಿತ್ತು. ಆದರೆ ಈಗ ಚಿತ್ರಣವೇ ಬದಲಾಗಿದೆ.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00