ಮಂಜೇಶ್ವರ ಪರಿಸರಕ್ಕೆ ಮಾದಕ ವಸ್ತು ಪೂರೈಸುತ್ತಿದ್ದ ವ್ಯಕ್ತಿಯ ಬಂಧನ: 13.394 ಗ್ರಾಂ ಮೆಥ ಫಿಟಮಿನ್ ವಶಕ್ಕೆ

by Narayan Chambaltimar

ಕುಂಬಳೆ : ಮಂಜೇಶ್ವರ ಪರಿಸರಕ್ಕೆ ಮಾರಕವಾದ ಮಾದಕವಸ್ತು ಮೆಥ ಫಿಟ್ಮಿನ್ ಪೂರೈಸುತ್ತಿದ್ದ ಜಾಲದ ವ್ಯಕ್ತಿಯನ್ನು 13.394ಗ್ರಾಂ ಮೆಥ ಫಿಟಮಿನ್ ಸಹಿತ ಬಂಧಿಸಲಾಗಿದೆ. ತಲಪಾಡಿ ಬಳಿಯ ಕೆಸಿ ರೋಡ್ ಸಮೀಪದ ಪಿಲಿಕೂರು ನಿವಾಸಿಯಾದ, ಮಂಜೇಶ್ವರ ರೈಲು ನಿಲ್ದಾಣ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಿ.ಎಂ.ಇಸ್ಮಾಯಿಲ್ (27) ಬಂಧಿತ ವ್ಯಕ್ತಿಯಾಗಿದ್ದಾನೆ.

ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಏಂಡ್ ನಾರ್ಕೋಟಿಕ್ ಸ್ಪೆಷಲ್ ಟೀಂನ ಕಾರ್ಯಾಚರಣೆಯಂತೆ ಈತನ ಬಂಧನ ನಡೆದಿದೆ.

ಈತ ಮಂಜಶ್ವರ ಭಾಗಕ್ಕೆ ವ್ಯಾಪಕವಾಗಿ ಮಾದಕವಸ್ತು ಪೂರೈಸುತ್ತಿದ್ದ ವ್ಯಕ್ತಿಯೆಂದು ಅಬಕಾರಿ ದಳ ತಿಳಿಸಿದೆ. ಈತನ ಕುರಿತು ದೊರೆತ ಸುಳಿವಿನ ಹಿನ್ನೆಲೆಯಲ್ಲಿ ಈತನ ಕಾರ್ಯ ಚಟುವಟಿಕೆಗಳ ಮೇಲೆ ಹದ್ದುಗಣ್ಣಿನ ನಿರೀಕ್ಷಣೆಯನ್ನಿಟ್ಟು ಕಾರಯಾಚರಣೆ ನಡೆಸಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00