ಕುಂಬಳೆ: ಅಬಕಾರಿ ದಳ ಮಧ್ಯರಾತ್ರಿ ವಾಹನ ತಪಾಸಣೆ ನಡೆಸುವ ವೇಳೆ ನಿಲ್ಲಿಸಲು ಸೂಚಿಸಿದರೂ, ನಿಲ್ಲದೇ ಪರಾರಿಯಾದ ಕಾರನ್ನು ಬೆನ್ನಟ್ಟಿ ನಶಪಡಿಸಲಾಗಿದೆ. ಕಾರಿನೊಳಗಿಂದ 12.087 ಗ್ರಾಂ ತೂಕದ ಮಾದಕವಸ್ತು “ಮೆಥ್ ಫಿಟ್ಮಿನ್” ಪತ್ತೆ ಹಚ್ಚಲಾಗಿದೆ.
ತಪಾಸಣೆ ಮಧ್ಯೆ ಕಾರಲ್ಲಿದ್ದ ಆರೋಪಿ ವಾಹನ ಉಪೇಕ್ಷಿಸಿ ಪರಾರಿಯಾದನೆಂದು ಹೇಳಲಾಗಿದೆ.
ಕುಂಬಳೆ ಮತ್ತು ಕಾಸರಗೋಡು ಅಬಕಾರಿ ದಳ ಸಂಯುಕ್ತವಾಗಿ ಶನಿವಾರ ರಾತ್ರಿ ಕುಂಬಳೆ ಸಮೀಪದ ಶಿರಿಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ರಾತ್ರಿ ವೇಳೆ ವಾಹನಕ್ಕೆ ಕೈ ತೋರಿಸಿದರೂ ನಿಲ್ಲಿಸದೇ ಪರಾರಿಯಾದ ಕಾರನ್ನು ಬೆನ್ನಟ್ಟಿದಾಗ ಅದು ಒಳಯಂ ಒಳರಸ್ತೆಯಲ್ಲಿ ಸಾಗಿತು. ಅನಂತರ ಮುಟ್ಟಂ ಕುನ್ನಿಲ್ ಮಸೀದಿ ಬಳಿಯ ಬಾಡಿಗೆ ಕ್ವಾರ್ಟರ್ಸ್ ಪರಿಸರದಲ್ಲಿ ನಿಲ್ಲಿಸಿ ಚಾಲಕ ಪರಾರಿಯಾದನು. ಈ ವೇಳೆ ಕಾರಿನಿಂದ ಮಾದಕವಸ್ತು ಪತ್ತೆ ಹಚ್ಚಲಾಯಿತು. ಓಡಿದ ಆರೋಪಿಯನ್ನು ಕುಬಣೂರು ಬೈತಲ ನಿವಾಸಿ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪರಾರಿಯಾದ ವ್ಯಕ್ತಿ ಈ ಹಿಂದೆಯೂ ಹಲವು ಅಬಕಾರಿ ಕೇಸುಗಳನ್ನು ಹೊಂದಿರುವವನಾಗಿದ್ದಾನೆಂದು ಹೇಳಲಾಗಿದೆ.





