2.9K
ಕಾಸರಗೋಡು : ಲೈಂಗಿಕ ದೌರ್ಜನ್ಯ ನಡೆಸಲೆತ್ನಿಸಿದನೆಂದು ಮಹಿಳೆ ನೀಡಿದ ದೂರಿನಂತೆ ಕಾಸರಗೋಡಿನ ಟ್ರಾವೆಲ್ಸ್ ಮಾಲಕ ಹಾಗೂ ಮಧೂರಿನ ವಿ.ಹಿಂ.ಪ ಕಾರ್ಯಕರ್ತನನ್ನು ಕಾಸರಗೋಡು ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.
ಕಾಸರಗೋಡು ಬ್ಯಾಂಕ್ ರಸ್ತೆಯ ಮಾರುತಿ ಟ್ರಾವೆಲ್ಸ್ ಸಂಸ್ಥೆಯ ಮಾಲಕ ಹಾಗೂ ವಿ.ಹಿಂ.ಪ , ಕ್ಷೇತ್ರ ಸಂರಕ್ಷಣ ಸಮಿತಿಯ ಪ್ರಮುಖ ಕಾರ್ಯಕರ್ತನಾದ ಮಧೂರು ಕೊಲ್ಯ ನಿವಾಸಿ ಅಪ್ಪಯ್ಯ ನಾಯ್ಕ್ (65) ಎಂಬವರು ಬಂಧಿತ ವ್ಯಕ್ತಿಯಾಗಿದ್ದಾರೆ.
ತನ್ನ ಟ್ರಾವೆಲ್ಸ್ ಸಂಸ್ಥೆಯ ನೌಕರೆ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣಾ ಎಸ್.ಐ.ನಳಿನಾಕ್ಷನ್ ಆರೋಪಿಯನ್ನು ಕಾಯ್ದೆ 354ರಡಿ ಬಂಧಿಸಿದರು.
ಬಂಧಿತ ವ್ಯಕ್ತಿಯನ್ನು ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯಕ್ಕೆ ಶನಿವಾರ ಅಪರಾಹ್ನ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರು ಸಂಘಪರಿವಾರದ ಧಾರ್ಮಿಕ ಕ್ಷೇತ್ರದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು.






