1.2K
ಕುಂಬಳೆ : ಕುಂಬಳೆ ಪೇಟೆಯ ಹಣ್ಣು ಹಂಪಲು, ಜ್ಯೂಸ್ ಅಂಗಡಿಯ ವ್ಯಾಪಾರಿಯ ಮೃತದೇಹ ಅಂಗಡಿ ಕಾಂಪ್ಲೆಕ್ಸಿನ ಮೇಲ್ಭಾಗದಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಯಿತು.
ಕುಂಬಳೆ ಪೆರುವಾಡಿನ ಕೃಷ್ಣ – ಪ್ರೇಮಾವತಿ ದಂಪತಿಯ ಪುತ್ರನಾದ ಸಂತೋಷ್ ಯಾನೆ ಸಂತು (38)ಮೃತ ವ್ಯಕ್ತಿಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನದ ವರೆಗೂ ಅಂಗಡಿವ್ಯಾಪಾರ ನಡೆಸಿದ್ದ ಇವರು ಮಧ್ಯಾಹ್ನದ ವೇಳೆ ಅರಿಮಲ ಕಾಂಪ್ಲೆಕ್ಸಿನ ಮೇಲೆ ತೆರಳಿ ನೇಣು ಬಿಗಿದು ಆತ್ಮಹತ್ಯೆಗೈದರೆನ್ನಲಾಗಿದೆ.
ಕೆಳಗಿನಿಂದ ಡ್ರಮ್ ಮೇಲಕ್ಕೆ ಕೊಂಡೊಯ್ದು ಅದರ ಮೇಲೆ ನಿಂತು ಕಂಬಿಗೆ ಹಗ್ಗ ಬಿಗಿದು ನೇಣು ಹಾಕಿದರೆಂದು ಶಂಕಿಸಲಾಗಿದೆ. ಮೃತರು ತಂದೆ,ತಾಯಿಗಳನ್ನಲ್ಲದೇ ಪತ್ನಿ ಮತ್ತು ಇಬ್ಬರು ಮಕ್ಕಳನ್ನಗಲಿದ್ದಾರೆ. ಮೃತರು ವ್ಯಾಪಾರಿ ಯೂತ್ ವಿಂಗ್ ಸಂಘಟನೆಯ ಕುಂಬಳೆ ಘಟಕ ಖಜಾಂಜಿಯಾಗಿದ್ದರು.





