ಕಾಸರಗೋಡು : ಕಮ್ಯೂನಿಸ್ಟ್ ಪಕ್ಷಗಳು ಎಲ್ಲಾ ಕಾಲಕ್ಕೂ ಭಾರತದೊಂದಿಗೆ ರಾಷ್ಟ್ರಪ್ರೇಮ ತೋರದೇ ಶತ್ರು ರಾಜ್ಯಗಳಿಗೆ ಬೆಂಬಲಿಸಿದ ಇತಿಹಾಸಹೊಂದಿದೆ. ಪೆಹಲ್ಗಾಂ ಘಟನಾವಳಿಯ ಹಿನ್ನೆಲೆಯಲ್ಲೂ ಸಿಪಿಐಎಂ ಪಾಕಿಸ್ಥಾನವನ್ನು ಬೆಂಬಲಿಸುವ ಚೀನಾ ಪರ ಒಲವು ತೋರಿದೆ ಎಂದು ಬಿಜೆಪಿ ಮಾಜಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದರು.
ಕಾಸರಗೋಡಿನಲ್ಲಿ ಬಿಜೆಪಿ ವತಿಯಿಂದ ನಡೆದ ಪಾಕಿಸ್ಥಾನೀಯರೇ ಭಾರತ ಬಿಟ್ಟು ತೊಲಗಿ ಎಂಬ ಬೇಡಿಕೆಯ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಅವರು ಮಾತನಾಡಿದರು.
ಪಾಕಿಸ್ಥಾನೀಯರೇ ಭಾರತ ಬಿಟ್ಟು ತೊಲಗಿ ಎಂಬ ಕೇಂದ್ರ ಆದೇಶವನ್ನು ಕೇರಳ ನಿರ್ಲಕ್ಷಿಸಿದೆ. ದೇಶದ ಮತ್ತೆಲ್ಲೂ ಕಾಣದ ರೀತಿಯ ಪಾಕ್ ಪ್ರೇಮ ಕೇರಳದಲ್ಲಿದೆ. ಪಾಕಿಸ್ಥಾನಿ ಹೆಸರಿನ ಗಲ್ಲಿ, ರಸ್ತೆ ಇರುವ ಕೇರಳದಲ್ಲಿ ಎಡ ಬಲ ರಂಗಗಳು ಭಯೋತ್ಪಾದನೆಗೆ ಪೋಷಣೆ ನೀಡುತ್ತಿವೆ ಎಂದು ಸುರೇಂದ್ರನ್ ಆರೋಪಿಕಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಮಾಜಿ ಜಿಲ್ಲಾಧ್ಯಕ್ಷ ವಿ.ರವೀಂದ್ರನ್, ವಿ.ಬಾಲಕೃಷ್ಣ ಶೆಟ್ಟಿ, ರವೀಶ ತಂತ್ರಿ, ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಕೆ.ಕೆ.ನಾರಾಯಣನ್, ಎಂ.ಬಲ್ರಾಜ್, ಮುರಳೀಧರ ಯಾದವ್, ಎಂ.ಜನನಿ, ಮಣಿಕಂಠರೈ, ಎಚ್.ಆರ್.ಸುಕನ್ಯ, ಎ.ಕೆ.ಕಯ್ಯಾರ್, ಸವಿತ ಟೀಚರ್, ಪ್ರಮೀಳ ಮಜಲ್, ಕೆ.ಎಂ.ಅಶ್ವಿನಿ, ಪುಷ್ಪಾ ಗೋಪಾಲ್, ಮಹೇಶ್ ಗೋಪಾಲ್, ಸಂಜೀವ ಪುಳ್ಕೂರು, ವೀಣಾ ಅರುಣ್ ಶೆಟ್ಟಿ ಮೊದಲಾದವರು ಮಾತನಾಡಿದರು. ಮನುಲಾಲ್ ಮೇಲತ್ತ್ ಸ್ವಾಗತಿಸಿ ಎನ್.ಬಾಬುರಾಜ್ ವಂದಿಸಿದರು.




