343
ಕಾಸರಗೋಡು : ನೋರ್ತ್ ಮಲಬಾರ್ ಗ್ರಾಮೀಣ ಬೇಂಕಿನ ಮಾಜಿ ರೀಜಿನಲ್ ಮೇನೇಜರ್ ಹಾಗೂ ರಾಮಕ್ಷತ್ರಿಯ ಸಮಾಜ ಮುಖಂಡರಾಗಿದ್ದ ಕಾಸರಗೋಡು ಅಣಂಗೂರು ನಿವಾಸಿ ಕಮಲಾಕ್ಷ ಕಲ್ಲಗದ್ದೆ (72)ನಿಧನರಾದರು.
ಹೃದಯಾಘಾತದಿಂದ ನಿನ್ನೆ ಸಂಜೆ ಅವರು ಮೃತಪಟ್ಟರು. ಎಡನೀರು ಬಳಿಯ ಕಲ್ಲಗದ್ದೆ ಮನೆತನದ ಪ್ರಮುಖರಾಗಿದ್ದ ಅವರು ರಾಮರಾಜ ಕ್ಷತ್ರಿಯ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷರಾಗಿದ್ದರು. ಅಲ್ಲದೇ ಎಡನೀರಿನ ಗಣೇಶೋತ್ಸವ ಸಹಿತ ಹಿಂದೂ ಧಾರ್ಮಿಕ ಚಟುವಟಿಕೆಗಳ ಮುಂಚೂಣಿ ಕಾರ್ಯಕರ್ತರಾಗಿದ್ದರು. ಎಡನೀರು ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗಂಡು ಸಮಾಜಿಕವಾಗಿ ಸಕ್ರಿಯರಿದ್ದರು. ಮೃತರು ಪತ್ನಿ ಸುಗಂಧಿ, ಮಕ್ಕಳಾದ ಚಂದ್ರಶೇಖರ, ರಾಜಲಕ್ಷ್ಮಿ ಎಂಬಿವರನ್ನು ಮತ್ತು ಅಪಾರ ಬಂಧುವರ್ಗ, ಅಭಿಮಾನಿಗಳನ್ನು ಅಗಲಿದಾರೆ.




