ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಸಿಪಿಐಎಂ ಕಟ್ಟಿ ಬೆಳೆಸಿದ ನಾಯಕ ಕೆ.ಅನಿರುದ್ಧನ್ ಅವರ ಪುತ್ರ ಕಸ್ತೂರಿ ಅನಿರುದ್ದನ್ ಹಿಂದೂ ಐಕ್ಯ ವೇದಿ ತಿರುವನಂತಪುರ ಜಿಲ್ಲಾಧ್ಯಕ್ಷರಾಗಿದ್ದಾರೆ. ಮೂರು ಬಾರಿ ಶಾಸಕ ಹಾಗೂ ಒಂದು ಬಾರಿ ಸಂಸದರಾಗಿದ್ದ ಅನಿರುದ್ಧನ್ ರ ಪುತ್ರ ಹಾಗೂ ಪ್ರಮುಖ ಸಿಪಿಐಎಂ ನಾಯಕ ಎ.ಸಂಪತ್ ರ ಸಹೋದರನಾದ ಕಸ್ತೂರಿ ಅನಿರುದ್ದನ್ ಹಿಂದೂ ಐಕ್ಯ ವೇದಿಯ ಜಿಲ್ಲಾಧ್ಯಕ್ಷರಾದದ್ದು ಸಿಪಿಐಎಂಗೆ ಇರಿಸುಮುರಿಸು ಉಂಟುಮಾಡಿದೆ.
ನಿನ್ನೆ ನಡೆದ ಹಿಂದೂ ಐಕ್ಯವೇದಿ ಜಿಲ್ಲಾ ಸಮ್ಮೇಳನದಲ್ಲಿ ಕಸ್ತೂರಿ ಅನಿರುದ್ದನ್ ಅಧ್ಯಕ್ಷರಾಗಿ ಘೋಷಣೆಯಾದರು. ಕಟ್ಟಾ ಕಮ್ಮೂನಿಸ್ಟ್,ಕುಟುಂಬ ಹಿನ್ನೆಲೆಯ ಕಸ್ತೂರಿ ಅನಿರುದ್ದನ್ ತನ್ನ ಕುಟುಂಬದ ಆಶಯಗಳ ವಿರೋಧ ಪಾಳಯಕ್ಕೆ ಹೇಗೆ ತಲುಪಿದರೆಂದರಿಯದೇ ಅಚ್ಚರಿಗೊಂಡಿದ್ದಾರೆ.
ಕಮ್ಯೂನಿಸ್ಠರು ಭಾರತೀಯ ಸನಾತನ ಸಂಸ್ಕಾರಗಳನ್ನು ನಾಶ ಮಾಡಲು ಎಲ್ಲಾ ಕಾಲದಲ್ಲೂ ಪ್ರಯತ್ನಿಸಿದ್ದಾರೆಂದು ಆರೋಪಿಸಿದ ಅವರು ಎಡಪಂಥೀಯರು ವಾಸ್ತವ ವಿರೋಧಿಗಳು. ತಾವು ಮಾಡುತ್ತಿರುವುದು, ನಂಬುತ್ತಿರುವುದು ತಪ್ಪೆಂದು ಅರಿತರೂ ತಪ್ಪು ತಿದ್ದಿಕೊಳ್ಳದವರು ಎಂದು ಮಾಧ್ಯಮಗಳ ಜತೆ ಪ್ರತಿಕ್ರಿಯಿಸಿದರು.
ನಾನು ತಪ್ಪನ್ನು ತಿದ್ದಿಕೊಂಡು ಹಿಂದೂ ಆಗಿಯೇ ಕಾಪಟ್ಯ ಇಲ್ಲದೇ ಬದುಕುತ್ತೇನೆ. ಹಿಂದೂ ಐಕ್ಯ ವೇದಿ ಜತೆ ಸಂಪರ್ಕ ಇತ್ತೇ ವಿನಃ ನಾನು ಪೂರ್ಣಾವಧಿಯ ಕಾರ್ಯಕರ್ತನಾಗಿರಲಿಲ್ಲ. ಈಗ ಸಂಘಟನೆ ನನಗೆ ಜವಾಬ್ದಾರಿ ನೀಡಿರುವುದನ್ನು ಸ್ವೀಕರಿಸಿದ್ದೇನೆ. ಸ್ವೀಕರಿಸಿದ ಬಳಿಕ ಸಹೋದರನಿಗೂ ತಿಳಿಸಿದ್ದೇನೆ ಎಂದರು.